ಸ್ವಾಮಿ ನಾನು ಗಂಡ್ಸೆ ಅಲ್ರೀ : ನಿತ್ಯಾನಂದ
ರಾಮನಗರ,
ಏ. 30 : ಸ್ವಾಮಿ ನಾನು ಗಂಡಸೇ ಅಲ್ಲ, ಹೀಗಾಗಿ ತಮಿಳು ಚಿತ್ರನಟಿ ರಂಜಿತಾ ಸೇರಿದಂತೆ ಅನೇಕ ಮಹಿಳೆಯರೊಂದಿಗೆ ನಾನು ನಡೆಸಿರುವೆ ಎನ್ನಲಾಗಿರುವ ರಾಸಲೀಲೆ ಆರೋಪಗಳು ಶುದ್ಧ ಸುಳ್ಳು ಎಂದು ವಿವಾದಿತ ದೇವಮಾನವ ಸ್ವಾಮಿ ನಿತ್ಯಾನಂದ ರಾಮನಗರ ನ್ಯಾಯಾಲಯದಲ್ಲಿ ಹೇಳಿಕೆ ನೀಡುವ ಮೂಲಕ ಅಚ್ಚರಿಗೊಳಿಸಿದ್ದಾನೆ. id="toptextpromo">ಕರ್ನಾಟಕ
ಸಿಐಡಿ ಪೊಲೀಸರ ವಶದಲ್ಲಿರುವ ಸ್ವಾಮಿ ನಿತ್ಯಾನಂದನ ವಿಚಾರಣೆಗಾಗಿ ಗುರುವಾರ ರಾಮನಗರದ ಜಿಲ್ಲಾ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನಿತ್ಯಾನಂದ ಈ ಹೇಳಿಕೆ ನೀಡಿದ್ದಾನೆ. ಸ್ವಾಮಿ ನಾನು ಗಂಡಸೇ ಅಲ್ಲ. ಹೀಗಿದ್ದಾಗ ಮಹಿಳೆಯರೊಂದಿಗೆ ರಾಸಲೀಲೆಯಲ್ಲಿ ತೊಡಗುವುದು ಹೇಗೆ ? ನನ್ನ ಮೇಲೆ ಮಾಡಿರುವ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಎಲ್ಲವೂ ಕೆಲವರ ಮಾಡಿರುವ ಸಂಚಿನ ಪ್ರತಿಫಲ, ನನ್ನ ಹೆಸರು ಕೆಡಿಸಬೇಕು ಎಂಬ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ವಿಡಿಯೋ ಚಿತ್ರೀಕರಣದಲ್ಲಿರುವುದು ನಾನಲ್ಲ. ಇದನ್ನು ನಂಬಲು ಸಾಧ್ಯವಿಲ್ಲ ಎಂದಾದರೆ, ನಾನು ಲಿಂಗ ಪರೀಕ್ಷೆಗೂ ರೆಡಿ ಎಂದು ನಿತ್ಯಾನಂದ ಹೇಳಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಆದರೆ,
ನಿತ್ಯಾನಂದನ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಸಿಐಡಿ ಪೊಲೀಸರು, ನಿತ್ಯಾನಂದನ ಪಾಸ್ ಪೋರ್ಟ್ ನಲ್ಲಿ ಗಂಡು ನಮೂದಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದ್ದಾರೆ. ವಿಡಿಯೋ ಚಿತ್ರೀಕರಣದಲ್ಲಿರುವುದು ನಿತ್ಯಾನಂದನೇ ಎಂದು ಹೈದರಾಬಾದ್ ನಿಂದ ಬಂದಿರುವ ವರದಿಯಿಂದ ಬಯಲಾಗಿದೆ. ಮೇ 3 ರಂದು ನಿತ್ಯಾನಂದನ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸಿಐಡಿ ಪೊಲೀಸರ ವಶದಲ್ಲಿರುವ ನಿತ್ಯಾನಂದನ ಬಂಧನ ಅವಧಿ ಇಂದು ಮುಗಿಯಲಿದೆ. ಇಂದು ಸಂಜೆ ಮತ್ತೆ ನಿತ್ಯಾನಂದನನ್ನು ರಾಮನಗರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.











Click it and Unblock the Notifications