ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಲಿಗರೇ, ಇಂಟರ್ನೆಟ್ ಹಳೆ ವೇಗಕ್ಕೆ ಮರಳಿದೆ

By Mahesh
|
Google Oneindia Kannada News

ದುಬೈ, ಏ.30: ಸಬ್ ಮರೈನ್ ಕೇಬಲ್ ವ್ಯವಸ್ಥೆ ಹದಗೆಟ್ಟ ಪರಿಣಾಮ, ಜಾಲಿಯಾಗಿ ವೆಬ್ ತಾಣಗಳಲ್ಲಿ ವಿಹರಿಸಲು ಮೂರ್ನಾಲ್ಕು ದಿನದಿಂದ ಕಷ್ಟಪಟ್ಟ ಜಾಲಿಗರಿಗೆ ಸಿಹಿ ಸುದ್ದಿ ದೂರದ ಮೆಡಿಟೇರಿಯನ್ ಸಮುದ್ರ ತಟದಿಂದ ಬಂದಿದೆ. ಭಾರತದ ಮುಖಾಂತರ ಆಗ್ನೇಯ ಏಷ್ಯಾ, ಯುರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ಜೋಡಿಸುವ SEA-ME-WE 4 (South East Asia-Middle East-West Europe 4) ಸಬ್ ಮರೈನ್ ಕೇಬಲ್ ನಲ್ಲಿ ಕಂಡು ಬಂದಿದ್ದ ದೋಷವನ್ನು ಸರಿಪಡಿಸಲಾಗಿದೆ.

ಸಬ್ ಮರೈನ್ ಕೇಬಲ್ ದುರಸ್ಥಿ ಕಾರ್ಯದಿಂದ ಏಷ್ಯಾ, ಯುರೋಪ ರಾಷ್ಟ್ರಗಳಲ್ಲಿ ಇಂಟರ್ನೆಟ್ ಅಕ್ಷರಶಃ ಅಮೆವೇಗ ಪಡೆದಿತ್ತು. ಹೈ ಸ್ಪೀಡ್ ಇಂಟರ್ನೆಟ್ ವ್ಯವಸ್ಥೆ ಭಾಗಶಃ ಹದಗೆಟ್ಟಿತ್ತು. ಮೆಡಿಟೇರಿಯನ್ ಸಮುದ್ರದ ತಳದಲ್ಲಿರುವ ಆಪ್ಟಿಕಲ್ ಫೈಬರ್ ಕೇಬಲ್ ದುರಸ್ತಿ ಕಾರ್ಯ ಯಶಸ್ವಿಯಾಗಿ ಪೂರೈಸಿದ್ದು, ಪೂರ್ಣ ಪ್ರಮಾಣದ ಇಂಟರ್ನೆಟ್ ವೇಗ ಪಡೆಯಲು ಕನಿಷ್ಠ24 ತಾಸು ಬೇಕಾಗುತ್ತದೆ ಎಂದು ಟೆಲಿಕಾಂ ಸಂಸ್ಥೆ ಇಟಿಸಲಾಟ್ (Etisalat) ತಿಳಿಸಿದೆ.

ಆಗ್ನೇಯ ಏಷ್ಯಾದ ಇಂಟರ್ ನೆಟ್ ಬೆನ್ನಲುಬಾಗಿರುವ ಈ ಕೇಬಲ್ ಸುಮಾರು 18,000 ಕಿ.ಮೀ ವರೆಗೂ ಹಬ್ಬಿದೆ. ಭಾರತ ಸೇರಿದಂತೆ, ಮಧ್ಯಪ್ರಾಚ್ಯ ಹಾಗೂ ಯುರೋಪ್ ದೇಶಗಳಿಗೂ ಇದೇ ಕೇಬಲ್ ವ್ಯವಸ್ಥೆ ಆಧಾರ. ಎರಡು ವರ್ಷಗಳಲ್ಲಿ ಇದು ಮೂರನೇ ಅಪ್ಟಿಕಲ್ ಫೈಬಲ್ ತಂತಿ ಕಡಿತ ಪ್ರಕರಣವಾಗಿದೆ.ಕಳೆದ ಜನವರಿಯಲ್ಲಿ ಹಾಗೂ 2008 ರ ಡಿಸೆಬರ್ ನಲ್ಲಿ ಈ ರೀತಿಯ ತೊಂದರೆ ಎದುರಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X