ಮ್ಯಾಚ್ ನಡೆಸಿದ್ದು ರೈಟ್ ಡಿಸಿಜನ್
ಬೆಂಗಳೂರು,
ಏ. 21 : ಕಳೆದ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬ್ ಸ್ಪೋಟ ಸಂಭವಿಸಿದ ನಂತರವೂ ಪಂದ್ಯ ನಡೆಯಲು ಅನುಮತಿ ನೀಡಿದ್ದು ಸರಿಯಾದ ಕ್ರಮ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಸಮರ್ಥಿಸಿಕೊಂಡರು. ಈ ಕೃತ್ಯದ ಹಿಂದೆ ರಾಜ್ಯ ಸರಕಾರದ ಮೇಲೆ ಕೆಟ್ಟ ಹೆಸರು ಯತ್ನವೂ ಅಡಗಿದೆ ಎಂದು ಆವರು ಆರೋಪಿಸಿದರು. id="toptextpromo">ಮಂಗಳವಾರ
ನಗರದಲ್ಲಿ ನಡೆದ ಅಗ್ನಿಶಾಮಕ ಹಾಗೂ ಗೃಹರಕ್ಷಕ ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಾರು 45 ಸಾವಿರ ಪ್ರೇಕ್ಷಕರಿದ್ದ ಕ್ರೀಡಾಂಗಣದಲ್ಲಿ ಪಂದ್ಯ ನಿಂತುಹೋಗಿದ್ದರೆ ಕಾಲ್ತುಳಿತದಂತ ಭಾರಿ ಅನಾಹುತ ಸಂಭವಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕೈಗೊಂಡ ಕ್ರಮ ಶ್ಲಾಘನೀಯ ನಿರ್ಧಾರ ಎಂದು ಪ್ರಶಂಸಿಸಿದರು. id='are-slot-1' class='oiad oi-axt oiadv'> id='top-searched-articles'>ಕೇವಲ
ಒಂದು ಪಂದ್ಯ ಸ್ಥಳಾಂತರವಾದರೆ ಅದರಿಂದ ನಷ್ಟವೇನೂ ಆಗುವುದಿಲ್ಲ. ಅದರ ಬಗ್ಗೆ ಆತಂಕ ಪಡುವ ಅಗತ್ಯವೂ ಇಲ್ಲ. ಭದ್ರತೆಯ ಕಾರಣದಿಂದ ಪಂದ್ಯ ಸ್ಥಳಾಂತರವಾಗಿಲ್ಲ. ನಿಜವಾದ ಕಾರಣಗಳು ಐಪಿಎಲ್ ಪದಾಧಿಕಾರಿಗಳಿಗೇ ಗೊತ್ತು. ಪ್ರಕರಣದಲ್ಲಿ ಬೆಟ್ಟಿಂಗ್ ದಂಧೆಯ ಕೈವಾಡ ಕೂಡ ಇದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಚಾರ್ಯ ವಿವರಿಸಿದರು.











Click it and Unblock the Notifications