ಕರಾವಳಿ ಪ್ರದೇಶಕ್ಕೆ ಉಗ್ರರ ಲಗ್ಗೆ : ಹೈಅಲರ್ಟ್
ಮಂಗಳೂರು,
ಏ. 21 : ದಕ್ಷಿಣ ಭಾರತದ ಸಮುದ್ರ ತೀರದ ಮೂಲಕ ಭಯೋತ್ಪಾದಕರು ದೇಶದೊಳಗೆ ನುಸುಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಕರ್ನಾಟಕ ಮತ್ತು ಕೇರಳದ ತೀರ ಪ್ರದೇಶದಲ್ಲಿ ಭಾರಿ ಕಣ್ಗಾವಲು ಹಾಕಲಾಗಿದೆ. id="toptextpromo">ಕೇಂದ್ರ
ಗುಪ್ತಚರ ಇಲಾಖೆ ನೀಡಿರುವ ನಿರ್ದೇಶನದ ಮೇರೆಗೆ ರಾಜ್ಯದ ಸಮುದ್ರ ತೀರದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಭಯೋತ್ಪಾದಕರು ದಕ್ಷಿಣ ಭಾರತದ ಸಮುದ್ರ ತೀರದ ಮೂಲಕ ದೇಶದೊಳಗೆ ನುಸುಳುವ ಸೂಚನೆಗಳು ಇವೆ. ಹೀಗಾಗಿ ಕರ್ನಾಟಕ ಮತ್ತು ಕೇರಳ ರಾಜ್ಯ ಸರಕಾರಗಳು ಕರಾವಳಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿವೆ. id='are-slot-1' class='oiad oi-axt oiadv'> id='top-searched-articles'>ಗುಪ್ತಚರ
ಇಲಾಖೆಯ ಸೂಚನೆಯಂತೆ ಕರಾವಳಿ ಪ್ರದೇಶದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಬಂದರು ಭದ್ರತಾ ಇಲಾಖೆ, ರಾಜ್ಯ ಪೊಲೀಸ್ ಇಲಾಖೆ ತೀರ ಪ್ರದೇಶದ ಮೇಲೆ ಹದ್ದಿನ ಕಣ್ಣು ಇರಿಸಿದೆ. ಕೇರಳದ ಕಾಸರಗೋಡು, ಕಣ್ಣೂರಿನ ಕರಾವಳಿ ಪ್ರದೇಶದಲ್ಲಿ ವ್ಯಾಪಕ ಭದ್ರತೆ ನಿಯೋಜಿಸಲಾಗಿದೆ ಎಂದು ಕೇರಳ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ರಾಜ್ಯದ ಮಂಗಳೂರು ಸೇರಿ ಕರಾವಳಿ ಪ್ರದೇಶದಲ್ಲಿ ಭದ್ರತೆ ನಿಯೋಜಿಸಲಾಗಿದೆ.











Click it and Unblock the Notifications