ವಾರಣಾಸಿ ಪುರೋಹಿತರ ಕೈಗೆ ಕೋಳ!
ಬೆಂಗಳೂರು,
ಏ. 14 : ಪಾಪ ತೊಳೆಯಲು ಬಂದಿದ್ದ 13 ಮಂದಿ ವಾರಾಣಾಸಿ ಪುರೋಹಿತರ ಕೈಗೆ ಬೆಂಗಳೂರಿನ ಪೊಲೀಸ್ ಆಯುಕ್ತ ಶಂಕರಿ ಬಿದರಿ ಕೋಳ ತೊಡಿಸಿದ್ದಾರೆ. ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಗೋಲ್ಡನ್ ಟವರ್ ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕಕ್ಕೆ ಹೋಮ ನಡೆಸಿದ್ದೆ ಕಾರಣ ಎಂದು ಪ್ರಾಥಮಿಕ ವರದಿಗಳ ಹಿನ್ನೆಲೆಯಲ್ಲಿ 13 ಮಂದಿ ವಾರಾಣಾಸಿ ಪೂಜಾರಿಗಳನ್ನು ಬಂಧಿಸಲಾಗಿದೆ. id="toptextpromo"> ಗೋಲ್ಡನ್ ಟವರ್ ನ ಮೇಲ್ಚಾವಣಿಯಲ್ಲಿ ಪತ್ತೆಯಾದ ಮೂರು ಯಜ್ಞ ಕುಂಡಗಳೇ ಅಗ್ನಿ ದುರಂತಕ್ಕೆ ಕಾರಣ ಎಂಬುದನ್ನು ಪತ್ತೆ ಹಚ್ಚಿರುವ ಪೊಲೀಸ್ ಆಯುಕ್ತ ಶಂಕರ ಬಿದರಿಯವರ ಪಡೆ, ಹೋಮ ನಡೆಸಿದ 13 ಮಂದಿ ಪುರೋಹಿತರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 285ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೆಯೋಹಾಲ್ ನ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. id='are-slot-1' class='oiad oi-axt oiadv'> id='top-searched-articles'> ಬಂಧಿಸಬೇಕಾದವರನ್ನು ಬಿಟ್ಟು ಬಡಪಾಯಿಗಳನ್ನು ಬಂಧಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧೀಶರು, ಪುರೋಹಿತರನ್ನು ಜಾಮೀನು ನೀಡಿ ಬಿಟ್ಟು ನ್ಯಾಯಾಲಯಕ್ಕೆ ಕರೆತಂದಿದ್ದಕ್ಕೆ ಸ್ಪಷ್ಟೀಕರಣ ಕೇಳಲಾಗಿದೆ. ತಪ್ಪಿಸಿಕೊಳ್ಳಲು ಹಿರಿಯ ಅಧಿಕಾರಿಗಳ ಆದೇಶ ಎಂದು ಸಬೂಬು ನೀಡಿದಾಗ ಯಾರ್ರೀ ಅದು ಸೀನಿಯರ್ ಆಫೀಸರ್ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನ್ಯಾಯಾಲಯದಲ್ಲಿ ನಡೆದಿದೆ.











Click it and Unblock the Notifications