ಮತ್ತೆ ಸೆಣಸಲಿವೆ ಚಾಲೆಂಜರ್ಸ್ ಮತ್ತು ಚಾರ್ಜರ್ಸ್

Anil Kumble, Adam Gilcrist
ನಾಗಪುರ, ಏ. 12 : ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಗೆಲುವಿನಿಂದ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೆಮಿಫೈನಲ್ ತಲುಪಲು ತವಕಿಸುತ್ತಿರುವ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಎದುರಿಸಲಿದೆ.

ಈ ಪಂದ್ಯದಲ್ಲಿನ ಗೆಲುವು ಚಾಲೆಂಜರ್ಸ್ ಗೆ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಸುಗಮವಾಗಿಸಲಿದೆ. ಸೋತರೆ, ಮುಂದಿನೆರಡು ಪಂದ್ಯಗಳನ್ನು ಗೆಲ್ಲಲೇಬೇಕಿರುವ ಅನಿವಾರ್ಯತೆ ಎದುರಾಗಲಿದೆ. ಅದನ್ನು ತಪ್ಪಿಸಲು ಅನಿಲ್ ಕುಂಬ್ಳೆ ಬಳಗ ಗೆಲುವಿಗಾಗಿ ಎಲ್ಲ ಕಸರತ್ತುಗಳನ್ನು ಮಾಡಬೇಕಿದೆ.

ಬದಲಾಗಿ ಆಡಿರುವ 11 ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಆರರಲ್ಲಿ ಮಣ್ಣುಮುಕ್ಕಿರುವ ಡೆಕ್ಕನ್ ಚಾರ್ಜರ್ಸ್ ತಂಡ ಎದುರಾಳಿ ಮೇಲೆ ಮುಗಿಬೀಳುವುದರಲ್ಲಿ ಅನುಮಾನವಿಲ್ಲ. ಏಪ್ರಿಲ್ 8ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಡೆಕ್ಕನ್ ಚಾರ್ಜರ್ಸ್ ಮಣ್ಣುಮುಕ್ಕಿಸಿತ್ತು. ಈಗ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಚಾಲೆಂಜರ್ಸ್ ಗೆ ಉತ್ತಮ ಅವಕಾಶ ಒದಗಿಬಂದಿದೆ.

ರಾಯಲ್ ಚಾಲೆಂಜರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿರುವ ಹಿಂದಿನ ಎರಡು ಪಂದ್ಯಗಳನ್ನು ಗೆದ್ದಿರುವ ಡೆಕ್ಕನ್ ತಂಡ ಕೂಡ ಸಾಕಷ್ಟು ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಕ್ರಿಕೆಟ್ ಪ್ರಿಯರಿಗೆ ಈ ಪಂದ್ಯ ರಸದೌತಣ ಬಡಿಸುವುದರಲ್ಲಿ ಅನುಮಾನವಿಲ್ಲ. ಆಟ ಸಂಜೆ 8ಕ್ಕೆ ಆರಂಭವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು :
ಅನಿಲ್ ಕುಂಬ್ಳೆ, ಜಾಕ್ ಕಾಲಿಸ್, ರಾಸ್ ಟೇಲರ್, ಕೆವಿನ್ ಪೀಟರ್ಸನ್, ರಾಹುಲ್ ದ್ರಾವಿಡ್, ಮಾರ್ಕ್ ಬೌಚರ್, ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ವಿರಾಟ್ ಕೋಹ್ಲಿ, ಪ್ರವೀಣ್ ಕುಮಾರ್, ಡೇಲ್ ಸ್ಟೇಯ್ನ್, ವಿನಯ್ ಕುಮಾರ್, ಕೆಮರೂನ್ ವೈಟ್.

ಡೆಕ್ಕನ್ ಚಾರ್ಜರ್ಸ್ : ಆಡಂ ಗಿಲ್ ಕ್ರಿಸ್ಟ್, ಸೈಮಂಡ್ಸ್, ಹರ್ಷೆಲ್ ಗಿಬ್ಸ್, ಹರ್ಮಿತ್ ಸಿಂಗ್, ವಿವಿಎಸ್ ಲಕ್ಷ್ಮಣ್, ಮೋನಿಶ್ ಮಿಶ್ರಾ, ಓಜಾ, ರೋಹಿತ್ ಶರ್ಮಾ, ಆರ್ಪಿ ಸಿಂಗ್, ಡ್ವೈನ್ ಸ್ಮಿತ್, ಚಮಿಂಡ ವಾಸ್, ವೇಣುಗೋಪಾಲ್ ರಾವ್, ಅನಿರುದ್ಧ, ಸುಮನ್, ಅರ್ಜುನ್ ಯಾದವ್.

ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ
ಐಪಿಎಲ್ 3 ಪಂದ್ಯಗಳ ಪಟ್ಟಿ
ಚಾಲೆಂಜರ್ಸ್ vs ಚಾರ್ಜರ್ಸ್ : ಕನ್ನಡದಲ್ಲಿ ಸ್ಕೋರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+