ಮೌಲ್ಯಮಾಪಕರ ಭತ್ಯೆ ಹೆಚ್ಚಳ, ಕಾಗೇರಿ
ಬೆಂಗಳೂರು,
ಏ. 11 : ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಭತ್ಯೆಗಳನ್ನು ಹೆಚ್ಚಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. id="toptextpromo"> ವಿಶ್ವ ಗೈಡ್ ಅಂದೋಲನ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಿಯು ಹಂತದಲ್ಲಿ ಒಂದು ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ಈಗ 12 ರುಪಾಯಿ ನೀಡಲಾಗುತ್ತಿದೆ. ಅದನ್ನು 15 ರುಪಾಯಿಗೆ ಹೆಚ್ಚಿಸಲಾಗುವುದು ಎಂದರು. id='are-slot-1' class='oiad oi-axt oiadv'> id='top-searched-articles'> ಎಸ್ಎಸ್ಎಲ್ ಸಿ ಪ್ರತಿಯೊಂದು ವಿಷಯದ ಉತ್ತರ ಪತ್ರಿಕೆಯ ಮೌಲ್ಯಮಾಪನ ಭತ್ಯೆಯನ್ನು ತಲಾ ಎರಡು ರುಪಾಯಿ ಹೆಚ್ಚಿಸಲಾಗುವುದು. ಎಸ್ಎಸ್ಎಲ್ ಸಿ ಯಲ್ಲಿ ಪ್ರತಿಯೊಂದು ವಿಷಯದ ಮೌಲ್ಯಮಾಪನ ಭತ್ಯೆ ಬೇರೆ ಬೇರೆ ಇದೆ. ಪ್ರಥಮ ಭಾಷೆಗೆ 6.30 ರುಪಾಯಿ ಇದ್ದು, ಪರಿಷ್ಕರಣೆಯ ನಂತರ 8.30ರುಪಾಯಿ ಆಗಲಿದೆ. ಉಳಿದ ವಿಷಯಗಳ ಭತ್ಯೆಗಳೂ ಹೆಚ್ಚಲಿವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.











Click it and Unblock the Notifications