ನನಗೆ ತಂದೆತಾಯಿಗಳಿಲ್ಲ, ಅಣ್ಣನೂ ತೀರಿದ

ಸ್ವಗ್ರಾಮ ಬೂಕನಕೆರೆಯಲ್ಲಿ ನಡೆದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಶ್ರೀಕ್ಷೇತ್ರ ಗಮಿಮಠದಲ್ಲಿ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿಗಳ ಗದ್ದುಗೆಗೆ ಕಳಸಾರೋಹಣ ನೆರವೇರಿಸಿದ ನಂತರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ನನ್ನ ಬಾಲ್ಯದ ದಿನಗಳು ಕಣ್ಮುಂದೆ ಬರುತ್ತಿದೆ. ಲಿಂಗೈಕ್ಯ ನನ್ನ ತಂದೆ ಸಿದ್ಧಲಿಂಗಪ್ಪನವರ ಜೊತೆ ಇಲ್ಲಿಗೆ ಬರುತ್ತಿದ್ದೆ. ಆ ದಿನಗಳಲ್ಲಿ ನನ್ನ ತಂದೆಯವರು ನನಗೆ, ನಿನಗೆ ಒಳ್ಳೆಯ ದಿನಗಳು ಮುಂದೊಂದು ದಿನ ಬರಲಿದೆ. ನೀನು ದೊಡ್ಡ ಮನುಷ್ಯನಾಗುತ್ತೀಯಾ ಎಂದು ಹೇಳಿದ್ದನ್ನು ಅವರು ನೆನಪಿಸಿಕೊಂಡರು.
ಇಂದು ನಾನು ಅವರ ಅಶೀರ್ವಾದದ ಫಲದಿಂದ ಹಾಗೂ ನಿಮ್ಮಗಳ ಹಾರೈಕೆಯಿಂದ ರಾಜ್ಯ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ಬಂದಿದ್ದೇನೆ ಎಂದು ಅಭಿಮಾನದ ಮಾತುಗಳನ್ನು ಆಡಿದರು. ಈ ಸಭೆಯಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ ಯಡಿಯೂರಪ್ಪ, ಭಾಷಣ ಮುಗಿಯುವವರೆಗೂ ರಾಜಕೀಯದ ಬಗ್ಗೆ ಒಂದೇ ಒಂದು ಮಾತು ಕೂಡಾ ಆಡಿಲಿಲ್ಲ.












Click it and Unblock the Notifications