ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಣೂರು ಜನಕ್ಕೆ ನಿತ್ಯ ಅಪಘಾತದ ಭಯ

By *ಚಂದ್ರಶೇಖರ್ ಬಿ., ಸವಣೂರ
|
Google Oneindia Kannada News

Delay in PWD works Savanur
ಸವಣೂರ,ಏ.9 : ಸವಣೂರ ಪುರಸಭೆಯ ರಸ್ತೆ ಅಭಿವೃದ್ದಿ ಕಾಮಗಾರಿ ಅಪೂರ್ಣ ಹಂತದಲ್ಲಿ ಸ್ಥಗಿತಗೊಂಡಿರುವ ಬಗ್ಗೆ ಆಕ್ಷೇಪಿಸಿ ಉಪವಿಭಾಗಾಧಿಕಾರಿ ಕೆ.ಪಿ ಮೋಹನರಾಜ್ ಅವರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಕಳೆದ ಒಂದು ತಿಂಗಳಿನಿಂದ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಸ್ಥಗಿತಗೊಂಡಿದೆ. ಕಾಮಗಾರಿ ಪುನಃ ಆರಂಭಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಸವಣೂರಿನ ನ್ಯಾಯಾಲಯದ ಎದುರಿನಲ್ಲಿರುವ ರಸ್ತೆ ನಗರದ ಪ್ರಮುಖ ಜನದಟ್ಟಣೆಯ ರಸ್ತೆಯಾಗಿದ್ದು, ಎಂಟು ಶಾಲೆಗಳು, ನ್ಯಾಯಾಲಯ, ಉಪವಿಭಾಗಾಧಿಕಾರಿಗಳ ಕಛೇರಿ ಸೇರಿದಂತೆ ಹತ್ತು ಹಲವಾರು ಕಛೇರಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯ ಕಾಮಗಾರಿ ಕಳೆದ ಒಂದು ತಿಂಗಳಿನಿಂದ ಏಕಾಏಕಿ ಸ್ಥಗಿತಗೊಂಡಿದೆ. ಇದರಿಂದಾಗಿ ಶಾಲೆಗೆ ಹೋಗುವ ಮಕ್ಕಳು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ರಸ್ತೆಗೆ ಕಲ್ಲುಗಳನ್ನು ಹಾಕಲಾಗಿದ್ದು, ಪ್ರತಿನಿತ್ಯ ಅವಘಡ ಸಂಭವಿಸುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಸಾರ್ವಜನಿಕರು ಹಾಗೂ ವಾಹನ ಸವಾರರಿಗೂ ಪ್ರತಿನಿತ್ಯ ಅಪಘಾತದ ಅಪಾಯಗಳು ಎದುರಾಗುತ್ತಿದ್ದು, ಸಾರ್ವಜನಿಕರಿಗೆ ಅತ್ಯಂತ ಹೆಚ್ಚಿನ ತೊಂದರೆಯಾಗಿದೆ. ಈ ರಸ್ತೆ ಕಾಮಗಾರಿಯನ್ನು ಪುನಃ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದ್ದರೂ, ಯಾವುದೇ ತಾತ್ಕಾಲಿಕ ಪರಿಹಾರವೂ ಲಭ್ಯವಾಗಿಲ್ಲ. ಕಾರಣ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಬೇಕು ಎಂದು ಪುನಃ ಕೋರಲಾಗುತ್ತಿದೆ. ಇಲ್ಲವಾದಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಇರುವ ಅಡೆತಡೆಗಳಬಗ್ಗೆ ಲಿಖಿತ ರೂಪದಲ್ಲಿ ಕಾರಣಗಳನ್ನು ನೀಡಬೇಕು ಎಂದು ಸಾರ್ವಜನಿಕರು ಮನವಿಯಲ್ಲಿ ಕೋರಿದ್ದಾರೆ.

ಪ್ರತಿಭಟನೆ:
ಮನವಿ ಸಲ್ಲಿಕೆಯ ಬಳಿಕ ಕೋರ್ಟ್ ರಸ್ತೆಗೆ ಅಳವಡಿಸಲು ತರಲಾಗಿರುವ ಹೈಮಾಸ್ಕ್ ದೀಪದ ಕಂಬಗಳನ್ನೇ ರಸ್ತೆಗೆ ಅಡ್ಡಲಾಗಿ ಇಟ್ಟಿರುವ ಸಾರ್ವಜನಿಕರು, ಸದರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ. ಈ ಬಗ್ಗೆ ಉಪವಿಭಾಗಾಧಿಕಾರಿಗಳೂ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಬಸವರಾಜ ಬುಶೆಟ್ಟಿ, ಬಾಹುದ್ದೀನ್ ಇನಾಂದಾರ್, ರಹಮಾನ್ ಆಪ್ರೀದಿ, ಪ್ರಸನ್ನ ಶೆಟ್ಟಿ, ಮಂಜು ಜೋರಾಪೂರಿ, ಶಿವಪ್ಪ ಕೆಂಚಣ್ಣನವರ್, ಗಿರೀಶ ಮುದಗಲ್ಲ, ರಾಮಾ ಎಮ್.ಕೆ ಸೇರಿದಂತೆ ಹಲವಾರು ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X