ರೋಗಿಯ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ಜೈಲು

ಮೆಲ್ಬೋರ್ನ್ ಯೂಥ್ ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕೆನೆಡಿ ಸ್ವಾಮಿ ಎಂಬಾತ 2009ರಲ್ಲಿ ಮಾನಸಿಕ ದೌರ್ಬಲ್ಯ ಹೊಂದಿದ ರೋಗಿಯ ಮೇಲೆ ಅತ್ಯಾಚಾರ ಎಸಗಿದ್ದ. ಒಬ್ಬ ಅಸಹಾಯಕ ಸ್ಥಿತಿಯ ದುರ್ಲಾಭ ಪಡೆದು ನಂಬಿಕೆ ದ್ರೋಹ ಮಾಡಿದ ಆರೋಪ ಆತ ಹೊತ್ತಿದ್ದ.
ಆಗ 28 ವರ್ಷದವನಾಗಿದ್ದ ಕೆನೆಡಿ ಸ್ವಾಮಿ ಯುವತಿಯನ್ನು ಸಂಪರ್ಕಿಸಿ ಬಚ್ಚಲು ಮನೆಯಲ್ಲಿ ಎರಡು ಬಾರಿ ಆಕೆಯನ್ನು ಕೂಡಿದ್ದ. ಆದರೆ, ತಾನು ಮಾಡುತ್ತಿರುವುದು ಸರಿಯಲ್ಲವೆಂದು ಅನಿಸಿದ ಯುವತಿ ಚಿಕಿತ್ಸೆಯ ಸಮಯದಲ್ಲಿ ಇದನ್ನು ಬಹಿರಂಗಪಡಿಸಿದ್ದಳು.
ಆಕೆಯ ರೋಗಲಕ್ಷಣವೇನೆಂದರೆ, ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವನ್ನು ರೋಗ ಕುಂದಿಸುತ್ತದೆ. ಆದ್ದರಿಂದ, ಸ್ವತಂತ್ರವಾಗಿ ಆಕೆ ಯಾವುದೇ ರೀತಿಯ ನಿರ್ಣಯ ತೆಗೆದುಕೊಳ್ಳಲು ಸಮರ್ಥಳಿರಲಿಲ್ಲ. ಇದರ ದುರ್ಲಾಭ ಪಡೆದ ಯುವಕ ಆಕೆಯ ಮೇಲೆ ಅತ್ಯಾಚಾರ ಮಾಡಿದ ಅಪರಾಧವೆಸಗಿದ್ದಾನೆ ಎಂದು ನ್ಯಾಯಾಧೀಶ ವಿಲ್ಮೋತ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications