ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಂಗಪಟ್ಟಣದಲ್ಲಿ ಮಳೆಗಾಗಿ ಕಪ್ಪೆ ಮೆರವಣಿಗೆ

By Shami
|
Google Oneindia Kannada News

Frog worshipped in Srirangapattana for rain
ಶ್ರೀರಂಗಪಟ್ಟಣ, ಏ. 5: ಯುಗಾದಿ ಹಬ್ಬದ ಆಚೆ ಅಥವಾ ಈಚೆ ಬೀಳಬೇಕಾಗಿದ್ದ ಮಳೆ ಇನ್ನೂ ಈ ಭಾಗದಲ್ಲಿ ಬೀಳದಿದ್ದ ಕಾರಣ ಆತಂಕಗೊಂಡಿರುವ ಗ್ರಾಮಸ್ಥರು ಮಳೆರಾಯನ ಹಬ್ಬ ಮಾಡಲು ಶುರು ಮಾಡಿದ್ದಾರೆ. ಭಾನುವಾರ (ಏ. 4) ತಾಲೂಕಿನ ನೀಲಕೊಪ್ಪಲು ಗ್ರಾಮದಲ್ಲಿ ಇಂತಹ ವಿಶಿಷ್ಟ ಆಚರಣೆ ನಡೆದಿದೆ.

ಗ್ರಾಮದ ಜನತೆ ಜೇಡಿ ಮಣ್ಣಿನಲ್ಲಿ ಬಿಸಿಲು ಮಾರಮ್ಮನ ಪ್ರತಿಮೆ ಮಾಡಿ ಪಕ್ಕದಲ್ಲಿ ಜೀವಂತ ಕಪ್ಪೆಯನ್ನು ಕೂರಿಸಿ ಊರ ತುಂಬಾ ಮೆರವಣಿಗೆ ಮಾಡಿದ್ದಾರೆ. ದೇವರನ್ನು ಹೊತ್ತ ವೇಷಧಾರಿ ಯುವಕನಿಗೆ ಪ್ರತಿ ಮನೆ ಮುಂದೆ ಬಿಂದಿಗೆಯಷ್ಟು ನೀರು ಹಾಕಿ ಪೂಜೆ ಸಲ್ಲಿಸಿದರು. ಗ್ರಾಮದ ಮಹಿಳೆಯರು ಕಪ್ಪೆ ಮತ್ತು ಬಿಸಿಲು ಮಾರಮ್ಮ ದೇವಿಗೆ ಅರಸಿನ, ಕುಂಕುಮ ಹಚ್ಚಿ ಕರ್ಪೂರ ಮತ್ತು ಗಂಧದ ಕಡ್ಡಿಯಿಂದ ಪೂಜೆ ಸಲ್ಲಿಸಿದರು.

ತಮಟೆ ಬಾರಿಸುತ್ತಾ ಮಾರಿ ಕುಣಿತದ ಮೂಲಕ ಗ್ರಾಮದ ಬೀದಿಗಳಲ್ಲಿ ಸಂಚರಿಸಿದ ಯುವಕರ ತಂಡ ಮನೆ ಮನೆಗಳಿಂದ ಅಕ್ಕಿ, ಬೇಳೆ ಮತ್ತು ಖಾರದ ಪುಡಿ ಸಂಗ್ರಹಿಸಿತು. ಬಳಿಕ ಈ ಉತ್ಸವವನ್ನು ಗ್ರಾಮದ ಪೂರ್ವ ದಿಕ್ಕಿನ ಬೇವಿನ ಮರದ ಕೆಳಗೆ ಕೊಂಡೊಯ್ದು ಮರದತಾಳಿನಲ್ಲಿ ಪೂಜೆ ಸಲ್ಲಿಸಿ ಊರ ಜನತೆಯಿಂದ ಸಂಗ್ರಹಿಸಿದ ಧವಸ ಧಾನ್ಯಗಳಿಂದ ಅಡುಗೆ ಮಾಡಿ ಬಿಸಿಲು ಮಾರಮ್ಮ ಮತ್ತು ಕಪ್ಪೆರಾಯನಿಗೆ ಎಡೆ ಮಾಡಿಕೊಟ್ಟು ನೀರುಬಿಟ್ಟರು. ಏನಾದರಾಗಲಿ, ಮಳೆ ಬರಲಿ. ನೀಲಕೊಪ್ಪಲು ತಂಪಾಗಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X