ಅತಿರುದ್ರ ಮಹಾಯಾಗಕ್ಕೆ ಸಂಭ್ರಮದ ಚಾಲನೆ

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗೌರೀಶಂಕರಜೀ ಅವರು, ಯಜ್ಞಯಾಗಾದಿಗಳಿಂದ ಲೋಕಕಲ್ಯಾಣವಾಗಲಿದ್ದು, ಇಂತಹ ಯಾಗಗಳು ಇಂದಿನ ಯುಗಕ್ಕೆ ಅತ್ಯವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಹಾನಗರದ ಎರಡನೆಯ ಅತಿದೊಡ್ಡ ಧ್ಯಾನಸ್ಥ ಭಂಗಿಯ ಶಿವನ ವಿಗ್ರಹವಿರುವ ಸನ್ನಿಧಿ ಇದಾಗಿದ್ದು, ಮಾಳಿಗೆ ಮನೆ ಸುಬ್ರಹ್ಮಣ್ಯ ಉಡುಪ ಮಾರ್ಗದರ್ಶನದಲ್ಲಿ ಹಾಗೂ ವಂಡಾರು ರಮೇಶ್ ಬಾಯರಿ ಅವರ ನೇತೃತ್ವದಲ್ಲಿ ಈ ಯಾಗ ನಡೆಯುತ್ತಿದೆ.
ಶನಿವಾರ ಆರಂಭವಾಗಿರುವ 12 ದಿನಗಳ ಯಜ್ಞ ಯಾಗಗಳು ಸೇರಿದಂತೆ ಹಲವು ಧಾರ್ಮಿಕ ಸಂಭ್ರಮದ ಸಾವಿರ ತೆಂಗಿನ ಕಾಯಿಯ ಮಹಾಗಣಪತಿ ಹೋಮ, ಸಹಸ್ರ ಚಂಡಿಕಾಯಾಗ, ಅಷ್ಟ ಪವಿತ್ರ ನಾಗಮಂಡಲ ಮತ್ತು ಅತಿರುದ್ರ ಮಹಾಯಾಗಗಳು ನಡೆಯಲಿದ್ದು, ಇವಲ್ಲದೆ ಹತ್ತಾರು ವಿವಿಧ ಮಂಗಳಕರವಾದ ಲೋಕಕಲ್ಯಾಣಪ್ರದವಾದ ಯಜ್ಞಯಾಗಾದಿಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಸಿದ್ಧ ಉದ್ಯಮಿ, ಸಮಾಜಸೇವಕರಾದ ಆರ್. ಪ್ರಭಾಕರ್ ಅವರು, ನಾಡಿನ ಮೂಲೆಮೂಲೆಗಳಿಂದ ನೂರಾರು ಮಂದಿ ವಿವಿಧ ವೇದ ಪುರಾಣಗಳನ್ನು ಅಧ್ಯಯನ ಮಾಡಿದ ಋತ್ವಿಜರು 12 ದಿನಗಳ ಕಾಲ ಈ ಪರಮ ಪುಣ್ಯಪ್ರದವಾದ ಕ್ಷೇತ್ರದಲ್ಲಿ ಸಮಾವೇಶಗೊಂಡು ಧರ್ಮ ಸಂಭ್ರಮವನ್ನು ಸಂಪನ್ನಗೊಳಿಸಲಿದ್ದಾರೆ. ಹಾಗೆಯೇ ಪ್ರತಿ ದಿನವೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಆರ್. ಪ್ರಭಾಕರ ರೆಡ್ಡಿಯವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅತಿರುದ್ರ ಮಹಾಯಾಗದ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ ಆಗಮಿಸಿದ್ದರು. ಅವರನ್ನು ಪ್ರಭಾಕರ್ ರೆಡ್ಡಿ ದಂಪತಿಗಳು ಅಭಿನಂದಿಸಿದರು.












Click it and Unblock the Notifications