ಎಚ್ಡಿಕೆ ಹುಟ್ಟುಹಬ್ಬ ಪ್ರಯುಕ್ತ ಜಂಗಿ ಕುಸ್ತಿ
ಬೆಳಗಾವಿ,
ಏ.3: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಏ.4ರಂದು ಜೆಡಿಎಸ್ ಬೆಳಗಾವಿ ಜಿಲ್ಲಾ ಘಟಕ ರಾಷ್ಟ್ರ ಮಟ್ಟದ ಜಂಗಿ ಕುಸ್ತಿ ಸ್ಪರ್ಧೆಯನ್ನು ಬೈಲಹೊಂಗಲ ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಆಯೋಜಿಸಿದೆ. id="toptextpromo">ಜೆಡಿಎಸ್
ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಪೂಜಾರಿ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ. ಪುರುಷರ ವಿಭಾಗದಲ್ಲಿ ಒಟ್ಟು 50 ಮಂದಿ ಹಾಗೂ ಮಹಿಳೆಯರ ವಿಭಾಗದಲ್ಲಿ ಒಟ್ಟು 12 ಮಂದಿ ಸ್ಪರ್ಧಾಳುಗಳು ಕಣದಲ್ಲಿದ್ದಾರೆ ಎಂದು ಅವರು ವಿವರ ನೀಡಿದರು. id='are-slot-1' class='oiad oi-axt oiadv'> id='top-searched-articles'>ಸ್ಪರ್ಧೆಯಲ್ಲಿ
ಖ್ಯಾತ ಜಂಗಿ ಕುಸ್ತಿ ಪಟುಗಳಾದ ದೆಹಲಿಯ ಭರತ್ ಕೇಸರಿ ನರೇಂದ್ರ, ಇಂದೋರ್ ನ ರೋಹಿತ್ ಪಟೇಲ್, ಕೊಲ್ಹಾಪುರದ ಅಸ್ಲಾಂ ಕಾಜಿ, ದೆಹಲಿಯ ರಮೇಶ್ ಕುಮಾರ್, ಮುಧೋಳದ ಪ್ರಕಾಶ್ ಮುಧೋಳ್, ದೆಹಲಿಯ ಸಮೀಂದ್ರ,ಕೊಲ್ಹಾಪುರದ ಮಾರುತಿ ಜಾವೇದ್ ಹಾಗೂ ಬಾಗಲಕೋಟೆಯ ಮಲ್ಲಪ್ಪ ಜಮಖಂಡಿ ಭಾಗವಹಿಸಲಿದ್ದಾರೆ. ಗೆದ್ದವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ಕ್ರಮವಾಗಿ ರು.3 ಲಕ್ಷ, ರು.1.5 ಹಾಗೂ ರು.1 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದು ಅಶೋಕ್ ಪೂಜಾರಿ ತಿಳಿಸಿದ್ದಾರೆ.











Click it and Unblock the Notifications