ಈದ್ಗಾ ಮೈದಾನ ಇನ್ನು ಚೆನ್ನಮ್ಮ ಮೈದಾನ
ಹುಬ್ಬಳ್ಳಿ,
ಏ.1: ಈದ್ಗಾ ಮೈದಾನವೆಂದೇ ಖ್ಯಾತಿ ಪಡೆದಿದ್ದ ನಗರದ ಹೃದಯ ಭಾಗದಲ್ಲಿರುವ ಕಿತ್ತೂರು ಚೆನ್ನಮ್ಮ ಮೈದಾನಕ್ಕೆ ನೂತನ ಮೇಯರ್ ವೆಂಕಟೇಶ್ ಮೇಸ್ತ್ರಿ ಬುಧವಾರ (ಮಾ.31) "ಕಿತ್ತೂರು ರಾಣಿ ಚೆನ್ನಮ್ಮ ಮೈದಾನ" ಎಂದು ಮರು ನಾಮಕರಣ ಮಾಡಿದ್ದಾರೆ. id="toptextpromo">ಪ್ರತಿಪಕ್ಷ
ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ತೀವ್ರ ವಿರೋಧದ ನಡುವೆಯೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ಈ ಆದೇಶ ನೀಡಿದ್ದಾರೆ. ಈದ್ಗಾ ಮೈದಾನವೆಂದೇ ಖ್ಯಾತಿ ಪಡೆದಿದ್ದ ಈ ಮೈದಾನ ರಾಷ್ಟ್ರಧ್ವಜಾರೋಹಣ ನೆರವೇರಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ, ಲಾಠಿ ಚಾರ್ಜ್, ಗೋಲಿಬಾರ್ ಗಳಂತಹ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿತ್ತು. id='are-slot-1' class='oiad oi-axt oiadv'> id='top-searched-articles'>ಇತ್ತೀಚೆಗೆ
ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ವಿರುದ್ಧ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಮೂಲಕ ಅದು ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಂತಾಗಿತ್ತು. ಪರಿಣಾಮವಾಗಿ ಈದ್ಗಾ ಮೈದಾನದಲ್ಲಿ ವರ್ಷಕ್ಕೆ 2 ಬಾರಿ ಮಾತ್ರ ನಮಾಜ್ ಮಾಡಲು ಮುಸ್ಲಿಂ ಬಾಂಧವರಿಗೆ ಅವಕಾಶ ಇದ್ದು, ಮಿಕ್ಕಂತೆ ಈ ಮೈದಾನ ಪಾಲಿಕೆಯ ಸ್ವತ್ತಾಗಿರಲಿದೆ.











Click it and Unblock the Notifications