ಮೂರು ದಿನದೊಳಗೆ ಹಾಲಿನ ದರ ಏರಿಕೆ
ಶಿವಮೊಗ್ಗ,
ಮಾ. 31 : ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ 2-3 ದಿನಗಳೊಳಗೆ ಕೆಎಂಎಫ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ನಿರ್ಣಯ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. id="toptextpromo"> ಶಿಕಾರಿಪುರ ತಾಲ್ಲೂಕು ಹುಚ್ಚುರಾಯಸ್ವಾಮಿ ದೇನಸ್ಥಾನದ ಚಾತ್ರೆಗೆ ಚಾಲನೆ ನೀಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಹೊರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ದರ ಕಡಿಮೆ. ಹಾಲಿನ ದರ ಹೆಚ್ಚಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ರಾಜ್ಯದ
2 ಲಕ್ಷ ಬಡಜನರಿಗೆ ನಿವೇಶನ ಒದಗಿಸಲು ಯೋಜನೆ ರೂಪಿಸಲಾಗಿದೆ. ಕೇಂದ್ರ ಉದ್ಯೋಗ ಖಾತ್ರಿ ಯೋಜನೆಯಲ್ಲಿ 2008-09 ನೇ ಸಾಲಿನಲ್ಲಿ ರಾಜ್ಯ 357ಕೋಟಿ ರುಪಾಯಿ, 2009-10 ನೇ ಸಾಲಿನಲ್ಲಿ 2350 ಕೋಟಿ ರುಪಾಯಿ ಖರ್ಚು ಮಾಡಿದೆ. ಕಳೆದ ಸಾಲಿನ ಪ್ರಗತಿಯನ್ನು ಗಮನಿಸಿಈ ಬಾರಿ ಕೇಂದ್ರ 4600 ಕೋಟಿ ಖರ್ಚು ಮಾಡಲು ಅನುಮತಿ ನೀಡಿದೆ ಎಂದು ಯಡಿಯೂರಪ್ಪ ವಿವರಿಸಿದರು.











Click it and Unblock the Notifications