ಕಾರಡಗಿಯಲ್ಲಿ ಸಂಭ್ರಮದ ವೀರಭದ್ರೇಶ್ವರ ರಥೋತ್ಸವ
ಸವಣೂರ,
ಮಾ. 31 : ಸಹಸ್ರಾರು ಕುಟುಂಬಗಳ ಕುಲದೈವವಾದ ಸುಕ್ಷೇತ್ರ ಕಾರಡಗಿ ಶ್ರೀವೀರಭದ್ರೇಶ್ವರ ದೇವರ ಮಹಾರಥೋತ್ಸವನ್ನು ಮಂಗಳವಾರ ಅತ್ಯಂತ ಸಂಜೆ ಶ್ರದ್ದಾ ಭಕ್ತಿ ಪೂರ್ವಕವಾಗಿ ಕೈಗೊಳ್ಳಲಾಯಿತು. id="toptextpromo">ಸಹಸ್ರಾರು
ಕಂಠಗಳ ಜಯಘೋಷಗಳ ನಡುವೆ ದೇವಸ್ಥಾನದ ಮಹಾದ್ವಾರದಿಂದ ಆರಂಭಗೊಂಡ ಭವ್ಯ ತೇರಿನ ಉತ್ಸವ ಪಾದಗಟ್ಟಿಯವರೆಗೆ ಜರುಗಿ ಪುನಃ ತೇರನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಮೂರು ದಿನಗಳ ಪರ್ಯಂತ ಜರುಗಲಿರುವ ಈ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ, ಮಹಾಗಣಾರಾಧನೆ, ಗುಗ್ಗಳ ಮಹೋತ್ಸವ ಹಾಗೂ ಸ್ವಾಮಿಯ ರಥೋತ್ಸವವನ್ನು ವಿಧಿವತ್ತಾಗಿ ಕೈಗೊಳ್ಳಲಾಯಿತು. id='are-slot-1' class='oiad oi-axt oiadv'> id='top-searched-articles'>ಸುಕ್ಷೇತ್ರ
ಮಂತ್ರವಾಡಿಯ ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ದಿ: 31ರಂದು ಕಡುಬಿನ ಕಾಳಗ ಹಾಗೂ ಪಲ್ಲಕ್ಕಿ ಉತ್ಸವ ಜರುಗಲಿದೆ.











Click it and Unblock the Notifications