ಹೈದರಾಬಾದ್ ನಲ್ಲಿ ಕೋಮುಗಲಭೆ, ಕರ್ಫ್ಯೂ
ಹೈದರಾಬಾದ್,
ಮಾ. 30 : ಪ್ರಾರ್ಥನಾ ಮಂದಿರದ ಬಳಿ ಹಾಕಿದ್ದ ಮತ್ತೊಂದು ಸಮುದಾಯದವರಿಗೆ ಸೇರಿದ ತೋರಣವನ್ನು ತೆಗೆಯುವ ಸಂಬಂದ ಹುಟ್ಟಿಕೊಂಡ ಜಗಳ ನಗರದ ಹಳೆಹೈದರಾಬಾದ್ ನಲ್ಲಿ ಕೋಮು ಸಂಘರ್ಷ ಉಂಟಾಗಿದೆ. ಚೂರಿ ಇರಿತದಿಂದ ಇಬ್ಬರು ಸತ್ತಿದ್ದು, 17 ಗಾಯಗೊಂಡಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಘಟನಾ ಸ್ಥಳದಲ್ಲಿ ಅನಿರ್ಧಿಷ್ಟ ಕಾಲದವರಿಗೆ ಕರ್ಫ್ಯೂ ವಿಧಿಸಲಾಗಿದೆ. id="toptextpromo">ಕಳೆದ
ಶನಿವಾರ ಘರ್ಷಣೆ ಆರಂಭವಾಗಿದ್ದು, ಸೋಮವಾರ ಇದು ಹಿಂಸಾರೂಪಕ್ಕೆ ತಿರುಗಿದೆ. ಹಲವು ವಾಹನಗಳು ಭಸ್ಮವಾಗಿದ್ದು, ಕೆಲವಡೆ ಮನೆಗಳು ದಾಳಿ, ಕಲ್ಲು ತೂರಾಟ ನಡೆದಿವೆ. ಸುಮಾರು 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಲಭೆ ತಡೆಗೆ ಕೇಂದ್ರೀಯ ಪಡೆಗಳ17 ತುಕಡಿಗಳನ್ನು ನಗರಕ್ಕೆ ಕರೆಸಿಕೊಳ್ಳಲಾಗಿದೆ. ಹಳೆ ಹೈದರಾಬಾದ್ ನಗರದಲ್ಲಿ 1990 ರಿಂದ ಇಚೆಗೆ ಇದೇ ಮೊದಲ ಬಾರಿಗೆ ಕೋಮು ಗಲಭೆ ಉಂಟಾಗಿದೆ. id='are-slot-1' class='oiad oi-axt oiadv'> id='top-searched-articles'>ಮನೆಗಳ
ಮೇಲೆ ದಾಳಿ ನಡೆದ ಅಲ್ಲಾಬಾದ್ ಸಮೀಪ ಉದ್ರಿಕ್ತರನ್ನು ಚೆದುರಿಸಲು ಪೊಲೀಸರು ಅಶ್ರವಾಯು ಸಿಡಿಸಿದರು. ಹಲವಡೆ ಮಾಧ್ಯಮಗಳ ವಾಹನಗಳನ್ನು ಗುರಿಯಾಗಿಸಿರಿಕೊಂಡು ದಾಳಿ ನಡೆಸಲಾಗಿದೆ. ಪರೀಕ್ಷಾ ಸಮಯದಲ್ಲಿ ನಡೆದಿರುವ ಈ ಗಲಭೆ ಪೂರ್ವ ನಿಯೋಜಿತ ಸಂಚು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.











Click it and Unblock the Notifications