ಬೆಳಗಾವಿ ಪಾಲಿಕೆಗೆ ಕನ್ನಡಿಗ ಮೇಯರ್
ಬೆಳಗಾವಿ,
ಮಾ. 30 : ತೀವ್ರ ಗೊಂದಲಗಳ ನಡುವೆ ಬೆಳಗಾವಿ ಮೇಯರ್ ಆಗಿ ಕನ್ನಡಿಗ ನಿಂಗಪ್ಪ ನಿರ್ವಾಣಿ ಆಯ್ಕೆಯಾಗಿದ್ದಾರೆ. ಮೇಯರ್ ಆಯ್ಕೆ ವಿರೋಧಿಸಿ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಲ್ಲದೆ ಮೇಯರ್ ಕುರ್ಚಿ ಮೇಲೆ ಚಪ್ಪಲಿ ಎಸೆದ ಪ್ರಕರಣ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. id="toptextpromo">ಬೆಳಗಾವಿ
ಮೇಯರ್ ಆಯ್ಕೆ ತೀವ್ರ ಕುತೂಹಲಕ್ಕೆ ಕೆರಳಿಸಿತ್ತು. ಕನ್ನಡಿಗರು ಮತ್ತು ಮರಾಠಿಗರ ಮಧ್ಯೆ ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಮೇಯರ್ ಸ್ಥಾನಕ್ಕಾಗಿ ಒಟ್ಟು 9 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಇಬ್ಬರು ತಮ್ಮ ನಾಮಪತ್ರಗಳನ್ನು ವಾಪಸ್ ತೆಗೆದುಕೊಂಡಿದ್ದರಿಂದ 7 ಅಭ್ಯರ್ಥಿಗಳು ಅಧಿಕೃತವಾಗಿ ಕಣದಲ್ಲಿದ್ದರು. ಸರಿಯಾದ ವಿಳಾಸ ನೀಡದ ಕಾರಣ ಚುನಾವಣಾ ಅಧಿಕಾರಿ ಯಲ್ಲಪ್ಪ ಕುರುಬರ ಅವರು 6 ನಾಮಪತ್ರಗಳನ್ನು ತಿರಸ್ಕರಿಸಿ, ಕನ್ನಡಿಗ ನಿಂಗಪ್ಪ ನಿರ್ವಾಣಿ ಅವರು ಮೇಯರ್ ಆಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. id='are-slot-1' class='oiad oi-axt oiadv'> id='top-searched-articles'>ಇದು
ನೀತಿ ಸಂಹಿತೆಗೆ ವಿರುದ್ಧವಾದ ಕ್ರಮ ಎಂದು ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರಲ್ಲದೇ ಮೇಯರ್ ಕುರ್ಚಿ ಕಡೆಗೆ ಚಪ್ಪಲಿ ಎಸೆದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.











Click it and Unblock the Notifications