ಶ್ರೀಶ್ರೀಗಳ ತೇಜೋವಧೆಗೆ ನಕಲಿ ವಿಡಿಯೋ
ಬೆಂಗಳೂರು
ಮಾ 30 : ವಿಶ್ವ ಗೋರಕ್ಷಣಾ ಅಭಿಯಾನ ಖ್ಯಾತಿಯ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಸ್ವಾಮೀಜಿಗಳ ಹೆಸರಿಗೆ ಮಸಿ ಬಳಿಯುವ ಯತ್ನ ನಡೆದಿದೆ ಎಂದು ಹೇಳಲಾಗಿದೆ. id="toptextpromo">ಶ್ರೀಗಳನ್ನೇ
ಹೋಲುವ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಅಶ್ಲೀಲ ವಿಡಿಯೋ ಚಿತ್ರೀಕರಿಸುತ್ತಿದ್ದ ತಂಡವನ್ನು ಮಠದ ಶಿಷ್ಯರು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಈ ವರದಿಯನ್ನು 'ಹೊಸ ದಿಗಂತ' ದಿನಪತ್ರಿಕೆ ತನ್ನ ಮಾರ್ಚ್ 30ರ ಮಂಗಳವಾರದ ಸಂಚಿಕೆಯಲ್ಲಿ ಪ್ರಕಟಿಸಿದೆ. id='are-slot-1' class='oiad oi-axt oiadv'> id='top-searched-articles'>ಈ
ಸಂಬಂಧ ಬೆಂಗಳೂರಿನ ಗಿರಿನಗರ ಬಡಾವಣೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸನಾತನ ಮತ್ತು ಗೋಸಂರಕ್ಷಣಾ ಅಭಿಯಾನದಲ್ಲಿ ಮಂಚೂಣಿಯಲ್ಲಿರುವ ಶ್ರೀಗಳ ತೇಜೋವಧೆ ಮಾಡುವ ಪ್ರಯತ್ನ ಇದಾಗಿದೆ ಎಂದು ಆಪಾದಿಸಲಾಗಿದೆ. ವಿದ್ಯುನ್ಮಾನ ಜಾಲವನ್ನು ಬಳಸಿಕೊಂಡು ಶ್ರೀಗಳ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಲೇ ಇದೆ ಎಂದು ಪೋಲೀಸ್ ದೂರಿನಲ್ಲಿ ಹೇಳಲಾಗಿದೆ.











Click it and Unblock the Notifications