ಗೌಡರೆ, ಬೇಳೆ ಬೇಯಿಸಿಕೊಳ್ಳಬೇಡಿ
ಬೆಂಗಳೂರು,
ಮಾ. 26 : ನೈಸ್ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ನೈಸ್ ವಿರುದ್ಧ ಹೋರಾಟ ನಡೆಸುತ್ತಿರುವ ದೇವೇಗೌಡರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದು, ಅವರ ಆಟ ನಡೆಯಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿಕಾರಿದರು. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮೈಸೂರು ಕಾರಿಡಾರ್ ರಸ್ತೆ ಯೋಜನೆ ನಿರಾತಂಕವಾಗಿ ಮುಂದುವರೆಯಲಿದೆ ಎಂದರು. ದೇವೇಗೌಡರು ಈ ನೈಸ್ ಯೋಜನೆಯನ್ನು ಆರಂಭಿಸಿದ್ದು, ಇದೀಗ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಬೊಬ್ಬೆ ಹಾಕುತ್ತಿರುವವರು ಅವರೇ, ಅವರು ಯಾಕೆ ಅಂದು ಅರ್ಥ ಈ ಸಮಸ್ಯೆ ಅರ್ಥವಾಗಲಿಲ್ಲ ಎಂದು ಯಡಿಯೂರಪ್ಪ ತಿರಗೇಟು ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನೈಸ್
ಯೋಜನೆ ಕುರಿತು ಮಾಜಿ ಮುಖ್ಯಮಂತ್ರಿಗಳಾದ ಧರಂಸಿಂಗ್, ಎಸ್ ಎಂ ಕೃಷ್ಣ ಕಾಲದಲ್ಲಿ ಬಹುತೇಕ ಕೆಲಸ ಆಗಿವೆ. ಈ ಬಗ್ಗೆ ಅವರಿಗೆ ಪತ್ರ ಬರೆದು ಮಾಜಿ ಪ್ರಧಾನಿಗಳು ಸರಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಯೋಜನೆಯನ್ನು ಮುಂದುವರೆಸಬೇಕೇ,ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು. ಕೂಡಲೇ ಈ ಇಬ್ಬರು ನಾಯಕರಿಗೆ ಪತ್ರ ಬರೆಯಲಾಗುವುದು. ಸಾಧ್ಯವಾದರೆ, ನಾನೇ ಈ ಇವರನ್ನು ಭೇಟಿ ಮಾಡಿ ಚರ್ಚಿಸುವೆ ಎಂದು ಯಡಿಯೂರಪ್ಪ ಹೇಳಿದರು.











Click it and Unblock the Notifications