ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ಧ್ವಂಸ : ಪೇಚಿಗೆ ಸಿಲುಕಿದ ಅಡ್ವಾಣಿ

By Mrutyunjaya Kalmat
|
Google Oneindia Kannada News

LK Advani
ರಾಯ್ ಬರೇಲಿ, ಮಾ. 26 : ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಅಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹಾಗೂ ಸಂಘ ಪರಿವಾರ ಹಿರಿಯ ನಾಯಕರು ಮಾಡಿದ ಪ್ರಚೋದನಾ ಭಾಷಣದಿಂದ ಕರಸೇವಕರು ಬಾಬ್ರಿ ಮಸೀದಿಗೆ ಮುತ್ತಿಗೆ ಹಾಕಿ ಧ್ವಂಸಗೊಳಿಸಿದರು ಎಂದು ಹಿರಿಯ ಐಪಿಎಸ್ ಅಧಿಕಾರಿ ಅಂಜು ಗುಪ್ತ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸಿಬಿಐ ನ್ಯಾಯಾಲಯದ ಅದೇಶದ ಮೇರೆಗೆ ಇಂದು ಹಾಜರಾದ ಅಂಜು ಗುಪ್ತ, ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ, ಸಂಘ ಪರಿವಾರದ ನಾಯಕರಾದ ಆಚಾರ್ಯ ಗಿರಿರಾಜ ಕಿಶೋರ್, ವಿನಯ್ ಕಟಿಯಾರ್, ಮರಳೀ ಮನೋಹರ ಜೋಶಿ, ಉಮಾಭಾರತಿ, ಅಶೋಕ್ ಸಿಂಘಾಲ್ ಮತ್ತು ಪ್ರಮೋದ್ ಮಹಾಜನ್ ಅವರು ಅಂದು ಏರ್ಪಡಿಸಿಲಾಗಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಆಗ ಮಾತು ಆರಂಭಿಸಿದ ಅಡ್ವಾಣಿ, ಬಾಬ್ರಿ ಮಸೀದಿ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಭಾಷಣ ಮಾಡುತ್ತಿದ್ದ ಅಲ್ಲಿ ಸೇರಿದ್ದ ಹಿಂದು ಕರಸೇವಕರಿಗೆ ಮತ್ತಷ್ಟು ಬಲ ಬಂದಂತಾಯಿತು. ಇವರ ನಂತರ ಸಂಘ ಪರಿವಾರ ಮುಖಂಡರೆಲ್ಲರೂ ಪ್ರಚೋದನಕಾರಿ ಭಾಷಣವನ್ನೇ ಮಾಡಿದ್ದರಿಂದ ಕರಸೇವಕರು ಬಾಬ್ರಿ ಮಸೀದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದರು ಎಂದು ಅಂಜು ಗುಪ್ತ ವಿವರಿಸಿದ್ದಾರೆ. 1992, ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆಯಿತು.ಆಗ ಅಂಜು ಗುಪ್ತ ಆ ಪ್ರದೇಶದ ಭದ್ರತಾ ಅಧಿಕಾರಿ ಕೆಲಸ ಮಾಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X