ಸಚಿವ ಕಟ್ಟಾ ಅವರ 'ಮಿಡ್ ನೈಟ್' ಚುನಾವಣೆ
ಬೆಂಗಳೂರು,
ಮಾ. 25 : ಮಧ್ಯರಾತ್ರಿ (ಮಾ. 25) ಕಳೆದು ಸ್ವಲ್ಪ ಹೊತ್ತಿನಲ್ಲಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಸ್ಥಳೀಯ ಬಿಜೆಪಿ ಅಭ್ಯರ್ಥಿ ಮನೆಗೆ ಭೇಟಿ ನೀಡಿದಾಗ ಪ್ರಚಾರ ನಡೆಸುತ್ತಿರುವುದನ್ನು ಕಾಂಗ್ರೆಸ್ ಕಾರ್ಯಕರ್ತರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಘಟನೆ ಹೆಬ್ಬಾಳದಲ್ಲಿ ನಡೆದಿದೆ. id="toptextpromo">ಹೆಬ್ಬಾಳ
ವಿಧಾನಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 22 ವಿಶ್ವನಾಥ ನಾಗೇನಹಳ್ಳಿ ವಾರ್ಡ್ ಬಿಜೆಪಿ ಅಭ್ಯರ್ಥಿ ಮಮತಾ ರವಿ ಅವರ ಮನೆಗೆ ಸಚಿವರು ತಡರಾತ್ರಿ ಭೇಟಿ ನೀಡಿದ್ದರು. ಬಿಜೆಪಿ ಅಭ್ಯರ್ಥಿ ಮನೆಯ ಸಮೀಪಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಮ್ಮ ಅವರ ಬೆಂಬಲಿಗರಿಗೆ ವಿಷಯ ತಿಳಿದು ಮಮತಾ ರವಿ ಮನೆ ಮುಂದೆ ಪ್ರತಿಭಟನೆಗೆ ಮುಂದಾದರು. ಸಚಿವರು ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ ಮತ್ತು ಮತದಾರರಿಗೆ ಒಂದೊಂದು ಮತಕ್ಕೆ 500 ರುಪಾಯಿ, ಸೀರೆ, ಮಧ್ಯ ವಿತರಿಸುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಬೆಂಬಲಿಗರು ಘೋಷಣೆ ಕೂಗಲಾರಂಭಿಸಿದರು. id='are-slot-1' class='oiad oi-axt oiadv'> id='top-searched-articles'>ವಿಷಯ
ತಿಳಿದ ಹೆಬ್ಬಾಳ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ವಾದ, ಪ್ರತಿವಾದದ ನಂತರ ಪೊಲೀಸರು ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.











Click it and Unblock the Notifications