ಭಗತ್ ಉಗ್ರನೆಂದು ಬಿಂಬಿಸಿದ್ದು ಕಾಂಗ್ರೆಸ್!
ನವದೆಹಲಿ,
ಮಾ. 25 : ಸ್ವಾತಂತ್ರ್ಯ ಹೋರಾಟಗಾರ ಸುಭಾಶ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ ಅವರನ್ನು ಬಗ್ಗೆ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಇದಕ್ಕೆ ಸ್ಪಷ್ಟ ನಿದರ್ಶನ ವೀರ ಸೇನಾನಿ ಭಗತ್ ಸಿಂಗ್ ಅವರಿಗೆ ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಹಣೆಪಟ್ಟಿ ಕಟ್ಟಿರುವುದು ಎಂಬುದಾಗಿ ಭಗತ್ ಸಿಂಗ್ ಅವರ ಮೊಮ್ಮಗ ಅಭಯ್ ಸಿಂಗ್ ಸಂಧು ಗಂಭೀರವಾಗಿ ಆರೋಪ ಮಾಡಿದ್ದಾರೆ. id="toptextpromo">ಸ್ವಾತಂತ್ರ್ಯ
ಸಂಗ್ರಾಮಕ್ಕಾಗಿ ಹೋರಾಡಿದ ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜಗುರು ಅವರನ್ನು 1931, ಮಾರ್ಚ್ 23ರಂದು ನೇಣಿಗೇರಿಸಲಾಗಿತ್ತು. ಆದರೆ ಭಗತ್, ಸುಖ್ ದೇವ್ ಹಾಗೂ ರಾಜಗುರು ಭಾರತೀಯರ ಅಭಿಮಾನದ ವೀರ ಪುತ್ರರಾಗಿಯೇ ಉಳಿದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅವರು ಭಯೋತ್ಪಾದಕರಂತೆ ಕಾಣುತ್ತಿದ್ದಾರೆ ಎಂದು ಸಂಧು ಕಿಡಿಕಾರಿದರು. id='are-slot-1' class='oiad oi-axt oiadv'> id='top-searched-articles'>ಗಾಂಧಿ,
ನೆಹರು ಕುಟುಂಬವನ್ನು ವೈಭವೀಕರಿಸುವ ಸಲುವಾಗಿಯೇ ಕಾಂಗ್ರೆಸ್ ಮೊದಲಿನಿಂದಲು ಭಗತ್ ಸಿಂಗ್ ಒಬ್ಬ ಭಯೋತ್ಪಾದಕ ಎಂದೇ ಬಿಂಬಿಸುತ್ತಿದೆ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಗತ್ ಸಿಂಗ್ ಬಾಂಬ್ ಎಸೆದಿದ್ದ, ಗುಂಡು ಹೊಡೆಯುತ್ತಿದ್ದ ಎಂಬುದಾಗಿ ಕಾಂಗ್ರೆಸ್ ಸಾರುತ್ತಲೇ ಬಂದಿದೆ. ಆದರೆ ಇದು ಸತ್ಯಾಂಶವಲ್ಲ, ಯಾಕೆಂದರೆ ನೆಹರು ಮತ್ತು ಗಾಂಧಿ ಕುಟುಂಬಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗಲು ಕಾಂಗ್ರೆಸ್ ಹೂಡಿರುವ ಷಡ್ಯಂತ್ರ ಇದು ಎಂದು ಅವರು ಕಿಡಿಕಾರಿದ್ದಾರೆ.











Click it and Unblock the Notifications