ಗುಜರಾತ್ ಗಲಭೆ; ಸಮನ್ಸ್ ನಿರ್ಲಕ್ಷಿಸಿದ ಮೋದಿ
ಅಹಮದಾಬಾದ್,ಮಾ.22:
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ವೋಚ್ಚ ನ್ಯಾಯಾಲಯ ನೇಮಿಸಿದ್ದ ವಿಶೇಷ ತನಿಖಾ ತಂಡ(ಎಸ್ ಐಟಿ-ಸಿಟ್) ಎದುರು ಹಾಜರಾಗುವಲ್ಲಿ ವಿಫಲರಾಗಿದ್ದಾರೆ. ಗುಜರಾತ್ ಗಲಭೆಗಳ(2002) ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಅವರನ್ನು ಪ್ರಶ್ನಿಸಲು ಸಿಟ್ ಸಮನ್ಸ್ ಜಾರಿಮಾಡಿತ್ತು. id="toptextpromo">ಮಾರ್ಚ್21ರಂದು
ಹಾಜರಾಗುವಂತೆ ಸಿಟ್ ಮಾರ್ಚ್ 11ರಂದು ಸಮನ್ಸ್ ಜಾರಿಗೊಳಿಸಿತ್ತು. ಮೋದಿ ಸಮನ್ಸ್ ನಿರ್ಲಕ್ಷಿಸಿರುವ ಕಾರಣ ಕಾನೂನು ಪರ್ಯಾಯಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಗುಜರಾತ್ ಗಲಭೆಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಲು ಮೋದಿ ಅವರನ್ನು ಇದೇ ಮೊದಲ ಬಾರಿಗೆ ಕರೆಯಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಗಲಭೆಗಳಲ್ಲಿ
ಮೃತಪಟ್ಟ ಎಶಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರು ದೂರು ನೀಡಿದ್ದರು. ಈ ಸಂಬಂಧ ಮೋದಿ ಅವರಿಗೆ ಸಿಟ್ ಸಮನ್ಸ್ ಜಾರಿ ಮಾಡಿತ್ತು. ಸಿಟ್ ಎದುರು ಮೋದಿ ಹಾಜರಾಗದಿರುವ ಬಗ್ಗೆ ಕಾಂಗ್ರೆಸ್ ಟೀಕಿಸಿದೆ. ಸಿಟ್ ನಂತಹ ಸಂವಿಧಾನಿಕ ಸಂಸ್ಥೆಯನ್ನು ಮೋದಿ ತುಚ್ಛೀಕರಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.











Click it and Unblock the Notifications