ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀ ಸುಶಮೀಂದ್ರತೀರ್ಥರ ಬೃಂದಾವನ ಪ್ರತಿಷ್ಠಾಪನೆ

By Mahesh
|
Google Oneindia Kannada News

Sri Sushameendra Teertha Swamiji
ರಾಯಚೂರು, ಮಾ.21: ನೆರೆಹಾವಳಿದಿಂದ ಕೊಂಚ ಕಾಲ ಮಂಕಾಗಿದ್ದ ಮಂತ್ರಾಲಯ ದೇಗುಲ ಇದೀಗ ಹೊಸ ಹುರುಪಿನೊಂದಿಗೆ ರಾಯರ ಮಠದ ಪ್ರಭೆಯನ್ನು ಉಳಿಸಲು ಅಲ್ಲಿನ ಸಿಬ್ಬಂದಿ ಸಜ್ಜಾಗಿದ್ದಾರೆ.ಮಂತ್ರಾಲಯದಲ್ಲಿ ಮಾ.24 ರಿಂದ ಏ.1 ರವರೆಗೆ ಮಹಾಸಮಾರಾಧನೆ ಹಾಗೂ ಶ್ರೀಸುಶಮೀಂದ್ರತೀರ್ಥರ ಬೃಂದಾವನ ಪ್ರತಿಷ್ಠಾಪನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮಾ.24 ಬೆಳಗ್ಗೆ ಪುಣ್ಯಾವಾಚಾನ, ನವಗ್ರಹ ವಾಸ್ತು ಹೋಮ ನಡೆಯಲಿದೆ. ಮಾ.25 ರಂದು ಪ್ರತಿಷ್ಠಾಂಗ ಹೋಮ, 26 ರಂದು 12 ಜನ ವಿದ್ವಾಂಸರು ಭಾಗವತ ಪುರಾಣ ನಡೆಸಿಕೊಡುವರು. ಮಾ.28 ರಂದು ನಡೆಯುವ ಬೃಂದಾವನ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಆಂಧ್ರದ ಸಿಎಂ ರೋಸಯ್ಯ ಚಾಲನೆ ನೀಡಲಿದ್ದಾರೆ.

ಮಾ. 28ರಂದು ಬೆಳಗ್ಗೆ ಪ್ರಾಣಪ್ರತಿಷ್ಠಾಪನೆ, ನೇತ್ರೋನಿಮಿಲನ, ಕಲಶಾಭಿಷೇಕ ನೇರವೇರಿಸಲಾಗುತ್ತದೆ. ಮಾ. 31ರಂದು ಮಹಾರಥೋತ್ಸವ ನಡೆಯಲಿದೆ. ಮಾ. 28 ರಿಂದ ಏ.1 ರವರೆಗೆ ಮಹಾಸಮಾರಾಧನೆ ಹಾಗೂ ಪಾಂಚರಾತ್ರೋತ್ಸವ ಕಾರ್ಯಕ್ರಮವಿರುತ್ತ್ತದೆ. ಮಾ. 29 ರಂದು ಗಜವಾಹನೋತ್ಸವ, ಮಾ. 30 ರಂದು ಪೂರ್ವಾರಾಧನೆ, ಮಾ.31 ರಂದು ಮಧ್ಯಾರಾಧನೆ ಹಾಗೂ ಮಹಾರಥೋತ್ಸವ ಮತ್ತು ಏ.1 ರಂದು ಮಹಾಸಮಾರಾಧನೆಯ ಸಮಾರೋಪ ನೆರವೇರುವುದು.

ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು: ಮಹಾಸಮಾರಾಧನೆ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟಿನ ನಿವೃತ್ತ್ತ ನ್ಯಾಯಮೂರ್ತಿ ಎಂ.ಎನ್ ವೆಂಕಟಾಚಲಯ್ಯ, ಟಿಟಿಡಿ ಚೇರ್ ಮನ್ ಆದಿಕೇಶವುಲು ಪಾಲ್ಗೊಳ್ಳಲಿದ್ದಾರೆ. ಈ ಮಹಾಸಮಾರಾಧನೆ ಹಿನ್ನೆಲೆಯಲ್ಲಿ ಶ್ರೀಸುಶಮೀಂದ್ರ ಪ್ರಶಸ್ತಿಗಳನ್ನು ಧಾರವಾಡದ ವಿದ್ವಾನ್ ಕೆ.ಎಸ್ ನಾರಾಯಣಾಚಾರ್ಯ, ಹೊಸಪೇಟೆಯ ಗಣಿ ಉದ್ಯಮಿ ರಂಗನಗೌಡರು ಅವರಿಗೆ ಪ್ರದಾನ ಮಾಡಲಾಗುತ್ತದೆ.

ಶ್ರೀಸುಶಮೀಂದ್ರತೀರ್ಥರ ಪಾರಿತೋಷಕವನ್ನು ಮಾಗಡಿ ಕರಣಿಕರ ವೇದ ಪಾಠಶಾಲೆ, ವಿವೇಕಾನಂದ ಹೋಂ ಫಾರ್ ಸೀನಿಯರ್ ಸಿಟಿಜನ್,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೆಹಬೂಬ್ ನಗರ ಶಾಖೆ, ಪಾಂಚಜನ್ಯ ವೆಲ್ ಫೇರ್ ಸೊಸೈಟಿ ಹಾಗೂ ಅರುಣಾ ಚೇತನಾ ಸಂಸ್ಥೆಗಳಿಗೆ ನೀಡಲಾಗುತ್ತದೆ.

ಸಚಿವರಿಗೆ ಸನ್ಮಾನ: ಈ ಮಹಾಸಮಾರಾಧನೆ ಕಾರ್ಯಕ್ರಮಗಳಲ್ಲಿ ಸಚಿವರಾದ ಡಾ.ವಿಎಸ್ ಆಚಾರ್ಯ, ಅರವಿಂದ ಲಿಂಬಾವಳಿ, ಶ್ರೀರಾಮುಲು ಮುಂತಾದವರನ್ನು ಸನ್ಮಾನಿಸಲಾಗುವುದು ಎಂದು ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿ ಮಠದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X