ಕೆಮಿಸ್ಟ್ರಿ ಅಬ್ಬಬ್ಬಾ ಸಾಕಪ್ಪಾ ಸಾಕು; ವಿದ್ಯಾರ್ಥಿಗಳು
ಬೆಂಗಳೂರು,
ಮಾ.19:ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯಾದ್ಯಂತ ಗುರುವಾರ ಆರಂಭವಾಗಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳು ಒಂಚೂರು ಖಿನ್ನರಾಗಿ ಕಾಣಿಸಿದರು. ಕಾರಣ ಏನು ಎಂದು ಕೇಳಿದರೆ, ಕೆಮಿಸ್ಟ್ರಿ ಮತ್ತು ಅಕೌಂಟೆನ್ಸಿ ವಿದ್ಯಾರ್ಥಿಗಳು ಈ ಬಾರಿಯ ಪ್ರಶ್ನಪತ್ರಿಕೆ ಸ್ವಲ್ಪ ಕ್ಲಿಷ್ಟಕರವಾಗಿತ್ತು ಎಂಬ ಉತ್ತರ ನೀಡಿದರು. id="toptextpromo">ಜೊತೆಗೆ
ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಒಟ್ಟು 23 ವಿದ್ಯಾರ್ಥಿಗಳು ಮೊದಲ ದಿನವೆ ಡಿಬಾರ್ ಆಗಿದ್ದಾರೆ. ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳ ಜಾಗದಲ್ಲಿ ಬೇರೆಯವರು (ಬದಲಿ ವಿದ್ಯಾರ್ಥಿಗಳು) ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಕೆಮಿಸ್ಟ್ರಿ
ಪರೀಕ್ಷೆ ಬರೆದ ಸೇಂಟ್ ಜೊಸೆಫ್ ಕಾಲೇಜಿನ ಪ್ರಸನ್ನ(ಹೆಸರು ಬದಲಾಯಿಸಲಾಗಿದೆ) ಎಂಬ ವಿದ್ಯಾರ್ಥಿ ಮಾತನಾಡುತ್ತಾ, ಪ್ರಶ್ನೆಗಳು ತುಂಬಾ ಉದ್ದವಾಗಿದ್ದು, ಕೆಲವು ಪ್ರಶ್ನೆಗಳು ಉದ್ದುದ್ದ ಉತ್ತರಗಳನ್ನು ನಿರೀಕ್ಷಿಸುತ್ತಿದ್ದವು. ಪ್ರಶ್ನೆಗಳನ್ನು ನೇರವಾಗಿ ಕೇಳಲಾಗಿತ್ತು ಎಂದು ಮತ್ತೊಬ್ಬ ವಿದ್ಯಾರ್ಥಿ ಉತ್ತರಿಸಿದರು. ಮುಂದಿನ ಪರೀಕ್ಷೆಗಳಾದರೂ ಸುಲಭವಾಗಿರಲಿ ಎಂಬುದು ಮತ್ತೊಬ್ಬ ವಿದ್ಯಾರ್ಥಿ ಆಶಯವಾಗಿತ್ತು.











Click it and Unblock the Notifications