ತ.ನಾಡು ಚುನಾವಣೆ, ಬೆಂಗಳೂರಿನಲ್ಲಿ ಪ್ರಚಾರ !!
ಬೆಂಗಳೂರು,
ಮಾ. 18 : ತಮಿಳುನಾಡಿನ ಅಸೆಂಬ್ಲಿ ಚುನಾವಣೆಗೂ ಬೆಂಗಳೂರಿನ ರಾಜಾಜಿನಗರಕ್ಕೂ ಒಂಥರಾ ಸಂಬಂಧ. ಧರ್ಮಪುರಿ ಜಿಲ್ಲೆಯ ಪೆನ್ನಾಗರಂ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲಿ ತಮಿಳುನಾಡು ನಾಯಕರು ರಾಜಾಜಿನಗರಕ್ಕೆ ಬಂದು ಮತದಾರರನ್ನು ಒಲೈಸುವುದಂದರೆ !! id="toptextpromo">ಹೌದು,
ರಾಜಾಜಿನಗರದ ಕೊಳಚೆ (ಸ್ಲಂ) ಪ್ರದೇಶದಲ್ಲಿ ವಾಸಿಸುವ ಸುಮಾರು ಮೂವತ್ತು ಸಾವಿರ ತಮಿಳಿಗರು ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯವರು ಮತ್ತು ಅಧಿಕೃತವಾಗಿ ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರು ಹೊಂದಿರುವವರು. ಹಾಗಾಗಿ ಎಐಡಿಎಂಕೆ , ಡಿಎಂಕೆ, ಪಿಎಂಕೆ ಪಕ್ಷದ ರಾಜಕೀಯ ನಾಯಕರುಗಳು ಬುಧವಾರ ( ಮಾ 17 ) ಈ ಪ್ರದೇಶಕ್ಕೆ ಭೇಟಿ ನೀಡಿ ಮತದಾರರಿಗೆ ಮುಂಗಡವಾಗಿ ಬಸ್ ಟಿಕೆಟ್ ಮತ್ತು ದಿನದ ಖರ್ಚಿಗೆ ಬೇಕಾಗುವಷ್ಟು ಹಣ ನೀಡಿ ಹೋಗಿದ್ದರೆನ್ನುವ ಸುದ್ದಿ. id='are-slot-1' class='oiad oi-axt oiadv'> id='top-searched-articles'>ಮತದಾನ
ದಿನ ಬಂದು ಮತ ಚಲಾಯಿಸಿ ಮಿಕ್ಕ ದುಡ್ಡು ಎಣಿಸಿಕೊಂಡು ಹೋಗಿ ಎನ್ನುವ ಫರ್ಮಾನು ಕೂಡ ನೀಡಿದ್ದಾರೆನ್ನುವ ಸುದ್ದಿಯಿದೆ. ಮತದಾರರನ್ನು ಓಲೈಸುವುದರಲ್ಲಿ ಡಿಎಂಕೆ ಒಂದು ಹೆಜ್ಜೆ ಮುಂದಿದೆ. ಈ ಕ್ಷೇತ್ರದ ಮರುಚುನಾವಣೆ ಮಾರ್ಚ್ 28 ರಂದು ನಡೆಯಲಿದೆ. ಅಂದು ಬಿಬಿಎಂಪಿ ಚುನಾವಣಾ ಕೂಡ ನಡೆಯಲಿದೆ. ಈ ಕ್ಷೇತ್ರದ ಮತದಾರರು ಅಲ್ಲೂ ಇಲ್ಲೂ ಎರಡೂ ಕಡೆ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೋ ಚುನಾವಣಾ ಆಯೋಗ ಇದಕ್ಕೆ ಉತ್ತರ ನೀಡಬೇಕು.











Click it and Unblock the Notifications