ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ನಾಲ್ಕು ಸಮಗ್ರ ಜೈವಿಕ ಕೇಂದ್ರಗಳು

By Mahesh
|
Google Oneindia Kannada News

Anthurium
ಬೆಂಗಳೂರು, ಮಾ. 18: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ(ಆರ್ ಕೆ ವಿವೈ) ಅಡಿಯಲ್ಲಿ,ಸುಮಾರು 26.40 ಕೋಟಿ ರು. ವೆಚ್ಚದ ನಾಲ್ಕು ಸಮಗ್ರ ಜೈವಿಕ ತೋಟಗಾರಿಕಾ ಕೇಂದ್ರಗಳನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ.

ಸದ್ಯ ನಗರದ ಹುಳಿಮಾವು ಪ್ರದೇಶದಲ್ಲಿರುವ ಜೈವಿಕ ಕೇಂದ್ರದ ಮಾದರಿಯಲ್ಲೇ ಬೀದರ್, ಕೊಪ್ಪಳ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಜೈವಿಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು.ಪ್ರತಿ ಜೈವಿಕ ತೋಟಗಾರಿಕಾ ಕೇಂದ್ರದಲ್ಲಿ ಒಂದು ಸುಸಜ್ಜಿತ ಪ್ರಯೋಗಾಲಯ, ವೈರಸ್ ಮುಕ್ತ ಸಸಿ ಪರಿಶೀಲನೆ ಹಾಗೂ ಏಕರೂಪ ಗುಣಮಟ್ಟದ ಸಸ್ಯ ಸಾಮಗ್ರಿ ಹೊಂದಿರಲಿದೆ ಎಂದು ತೋಟಗಾರಿಕಾ ಇಲಾಖೆ ನಿರ್ದೆಶಕ ಎನ್ ಜಯರಾಂ ತಿಳಿಸಿದರು.

ಈ ಜೈವಿಕ ಕೇಂದ್ರಗಳಲ್ಲಿ ಕೀಟ ಮತ್ತು ರೋಗ ಬಾಧೆಯಿಂದ ಮುಕ್ತವಾದ ಸಸಿಗಳು ವರ್ಷವಿಡಿ ಲಭ್ಯವಿರುತ್ತದೆ. ಟಿಷ್ಯೂ ಕಲ್ಚರ್ ಬಳಸಿ, ಬಾಳೆಹಣ್ಣು, ಆಂಥೋರಿಯಂ, ಆರ್ಕಿಡ್ ಗಳು ಸೇರಿದಂತೆ ನಶಿಸಿಹೋಗುತ್ತಿರುವ ಔಷಧೀಯ ಹಾಗೂ ಸುಗಂಧ ಸಸ್ಯಗಳನ್ನು ಉಳಿಕೆಯತ್ತ ಈ ಪ್ರಯೋಗಾಲಯಗಳು ಕೆಲಸ ಮಾಡಲಿವೆ. ಇದರಿಂದ ಸ್ಥಳೀಯ ಬೆಳೆಗಾರರು, ಕೃಷಿಕರು ಹಾಗೂ ನರ್ಸರಿ ಮಾಲೀಕರಿಗೆ ನೆರವಾಗಲಿದೆ. ಈ ಮೂಲಕ ಗ್ರಾಮೀಣ ಉದ್ಯೋಗವಕಾಶ ವೃದ್ಧಿಗೆ ಸಹಾಯಕವಾಗಲಿದೆ ಎಂದು ಜಯರಾಂ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X