ಮಂಗಳೂರು : ಛೋಟಾ ಶಕೀಲ್ ಸಹಚರರ ಬಂಧನ
ಮಂಗಳೂರು,
ಮಾ. 17 : ಭೂಗತದೊರೆ ರವಿ ಪೂಜಾರಿ ಗ್ಯಾಂಗಿನ ಸದಸ್ಯರ ಕೊಲೆಗೆ ಸಂಚು ರೂಪಿಸಿದ್ದ ಮತ್ತೊಬ್ಬ ಭೂಗತದೊರೆ ಛೋಟಾ ಶಕೀಲ್ 11 ಮಂದಿ ಸಹಚರರನ್ನು ಬಂಧಿಸುವಲ್ಲಿ ಮಂಗಳೂರು ಅಪರಾಧಿ ವಿಭಾಗದ ಪೊಲೀಸರು ಬುಧವಾರ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಕಾರ್, ರಿವಾಲ್ವರ್, ಮೊಬೈಲ್ ಫೋನ್ ಹಾಗೂ 68 ಸಾವಿರ ರುಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. id="toptextpromo">ಈ
ಕುರಿತು ಪತ್ರಿಕಾಗೋಷ್ಠಿ ನಡೆಸಿದ ಪಶ್ಚಿಮ ವಲಯದ ಐಜಿಪಿ ಗೋಪಾಲ್ ಹೊಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಸುಬ್ರಮಣ್ಯೇಶ್ವರ ರಾವ್, ಭೂಗತ ಪಾತಕಿ ರವಿ ಪೂಜಾರಿ ತಂಡದ ಸದಸ್ಯರ ಕೊಲೆಗೆ ಸಂಚು ರೂಪಿಸಿದ್ದ ಛೋಟಾ ಶಕೀಲ್ ಸಹಚರರು ಎನ್ನಲಾದ 11 ಮಂದಿಯನ್ನು ಬಂಧಿಸುವಲ್ಲಿ ಮಂಗಳೂರು ಅಪರಾಧಿ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೇ ಬಂಧಿತ ಆರೋಪಿಗಳು ನಗರದ ಉದ್ಯಮಿದಾರರಿಗೆ ಬೆದರಿಕೆ ಒಡ್ಡಿದ್ದರು ಎಂದು ಹೊಸೂರು ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಮಂಜುನಾಥ್
ಅಲಿಯಾಸ್ ಮಂಜ(22), ಸುಶೀಲ್ ಕುಮಾರ್ ಅಲಿಯಾಸ್ ಮೋನು(24), ಲತೀಸ್ ನಾಯ್ಕ್ ಅಲಿಯಾಸ್ ಲಸ್ಸಿ(21), ಅಶ್ವಿನ್ ಅಂಚನ್(25), ಸುರೇಶ್ ಅಲಿಬಾನ್ ಡಿಸೋಜಾ(38), ಲೋಹಿತ್ ಗಟ್ಟಿ(21), ಪ್ರವೀಣ್(30), ಸುಸಾನ್ ಚಂದ್ರ(22) ಬಂಧಿತ ಆರೋಪಿಗಳಾಗಿದ್ದಾರೆ.











Click it and Unblock the Notifications