ಮಾಯಾವತಿಗೆ ಏನಾಗಿದೆ..?

Another cash garland worth Rs 18 lakh for Mayawati
ಲಖನೌ, ಮಾ. 17 : ವಿವಾದವನ್ನು ಹುಟ್ಟುಹಾಕಿದಿದ್ದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರಿಗೆ ನಿದ್ದೆ ಬರುವುದಿಲ್ಲ. ತಮ್ಮ ಮೂರ್ತಿಯನ್ನು ರಾಜ್ಯದ್ಯಾಂತ ಸ್ಥಾಪಿಸಿ ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ ಎರಡು ಭಾರಿ ನೋಟಿನ ಹಾರ ಹಾಕಿಸಿಕೊಳ್ಳುವ ಮೂಲಕ ತೀವ್ರ ಟೀಕೆ, ಆಕ್ರೋಶ ಕಾರಣರಾಗಿದ್ದಾರೆ.

ಮಾಯಾವತಿ ಉತ್ತರ ಪ್ರದೇಶ ಬಹುಜನ ಸಮಾಜ ಪಕ್ಷದ ನಾಯಕಿ ಹಾಗೂ ಪ್ರಸ್ತುತ ಆ ರಾಜ್ಯದ ಮುಖ್ಯಮಂತ್ರಿ. ಈಯಮ್ಮನ ಹುಚ್ಚಾಟಕ್ಕೆ ಅಲ್ಲಿನ ಜನರು ನಗಬೇಕೋ, ಅಳಬೇಕೋ ತಿಳಿಯದಾಗಿದೆ. ರಾಜ್ಯದ ಮುಖ್ಯಮಂತ್ರಿಯಂತಹ ಅತ್ಯಂತ ಪ್ರಭಾವಿ ಹುದ್ದೆಯಲ್ಲಿರುವ ಮಾಯಾವತಿ, ನೋಟಿನ ಹಾರವನ್ನು ಹಾಕಿಕೊಂಡು ಜನರತ್ತ ಕೈಬೀಸುವುದೇ ?

ನೋಟನ್ನು ಸರವಾಗಿಸಿಕೊಂಡು ಕೊರಳಲ್ಲಿ ಹಾಕಿಸಿಕೊಂಡು ಕುಣಿಯುದು, ಹಾಡುವುದು, ನೃತ್ಯ ಮಾಡುವುದು ಸಾಮಾನ್ಯ. ಪ್ರೇಕ್ಷಕರು ಖುಷಿಯಿಂದ ನೋಟಿನ ಹಾರ ಹಾಕಿ ಮಜಾ ಉಡಾಯಿಸುವುದು ಕಂಡು ಬರುವ ದೃಶ್ಯ. ಆದರೆ, ಇಂದಲ್ಲ, ನಾಳೆ ಭಾರತದ ಪ್ರಧಾನಮಂತ್ರಿಯಾಗುವೆ ಎಂದು ಬೀಗುವ ಮಾಯಾವತಿ ನೋಟಿನ ಹಾರ ಹಾಕಿಸಿಕೊಂಡು ಆತ್ಮರತಿ ಪ್ರದರ್ಶಿಸಿಸುವುದು ಸಹಿಸಲು ಸಾಧ್ಯವೇ ? ಇವರು ಭಾರತದ ಪ್ರಧಾನಿಯಾದರೆ ಗತಿ ಏನು ?

ಲಖನೌನಲ್ಲಿ ಬಿಎಸ್ ಪಿ ಕಾರ್ಯಕರ್ತರು ಏರ್ಪಡಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರಿಗೆ ಕಾರ್ಯಕರ್ತರು ಸುಮಾರು 18 ಲಕ್ಷ ರುಪಾಯಿಯ ನೋಟಿನ ಹಾರವನ್ನು ಹಾಕಿ ಕೇಕೆ ಹಾಕಿದ್ದಾರೆ. ಮಾಯಾವತಿ ಅವರ ಹುಚ್ಚಾಟಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪಿಸಿವೆ. ಲೋಕಸಭೆಯಲ್ಲೂ ಕೂಡಾ ಇದರ ಬಗ್ಗೆ ಚರ್ಚೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+