ಬಸ್ ನದಿಗೆ ಬಿದ್ದು 26 ವಿದ್ಯಾರ್ಥಿಗಳು ಸಾವು

Rajasthan bus mishap
ಸವಾಯ್ ಮಧುಪುರ(ರಾಜಸ್ತಾನ), ಮಾ. 15 : ಚಾಲಕನ ನಿಯಂತ್ರಣ ತಪ್ಪಿದ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ನದಿಗುರುಳಿದ್ದರಿಂದ ಸುಮಾರು 26 ವಿದ್ಯಾರ್ಥಿಗಳು ಮೃತಪಟ್ಟಿದ್ದು, 35 ಕ್ಕ5 ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಭೀಕರ ಘಟನೆ ರಾಜಸ್ತಾನದ ಸವಾಯ್ ಮಧುಪುರದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.

ಜಲಾವರ್‌ನಲ್ಲಿನ 'ಮದರ್ ಇಂಡಿಯಾ' ಶಿಕ್ಷಕರ ತರಬೇತಿ(ಬಿಎಡ್) ಕಾಲೇಜಿನ 62 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನು ಹೊತ್ತಿದ್ದ ಬಸ್ ಅಫಘಾತಕ್ಕೀಡಾಗಿದ್ದು, 11 ಮಹಿಳೆಯರೂ ಸೇರಿದಂತೆ ಒಟ್ಟು 26 ಮಂದಿ ಸಾವನ್ನಪ್ಪಿರುವುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಮುಂಜಾನೆ 3.30ರ ಹೊತ್ತಿಗೆ ಜೈಪುರದಿಂದ 162 ಕಿಲೋ ಮೀಟರ್ ದೂರದಲ್ಲಿರುವ ಸವಾಯಿ ಮಧುಪುರ - ದೌಸಾ ಗಡಿ ನಡುವೆ ಈ ಘಟನೆ ಸಂಭವಿಸಿದ್ದು, ಸೇತುವೆಯಲ್ಲಿ ನಿಂತಿದ್ದ ವಾಹನವೊಂದಕ್ಕೆ ಬಸ್ ಢಿಕ್ಕಿ ಹೊಡೆದ ಬಳಿಕ ನದಿಗೆ ಉರುಳಿ ಬಿದ್ದಿದೆ. ಬೃಂದಾವನಕ್ಕೆ ಶೈಕ್ಷಣಿಕ ಪ್ರವಾಸ ಹೊರಟಿದ್ದ ತಂಡವು ಜಲಾವರ್‌ಗೆ ಮರಳುತ್ತಿತ್ತು.

ಈ ಘಟನೆ ಮುಂಜಾನೆ ನಡೆದಿದೆ. ಶಿಕ್ಷಕರ ತರಬೇತಿ ಶಾಲೆಯ ಬಸ್ ಸೇತುವೆಯಿಂದ ಮೋರೆಲ್ ಎಂಬ ನದಿಗೆ ಉರುಳಿ ಬಿದ್ದಿದೆ. ಪರಿಹಾರ ಕಾರ್ಯಗಳು ನಡೆಯುತ್ತಿವೆ. ಇದುವರೆಗೆ 26 ಶವಗಳು ಪತ್ತೆಯಾಗಿವೆ ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+