ಮಾ.15ರಂದು ಬಿಎಸ್ಎನ್ಎಲ್ ನೌಕರರ ಮುಷ್ಕರ?
ನವದೆಹಲಿ,
ಮಾ.13: ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್ಎನ್ಎಲ್) ಉದ್ದೇಶಿಸಿರುವ ಶೇ.30ರಷ್ಟು ಷೇರು ವಿಕ್ರಯ ನಿರ್ಧಾರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಕಂಪನಿಯ ನೌಕರರು ನಿರ್ಧರಿಸಿದ್ದಾರೆ. id="toptextpromo">ಷೇರು
ವಿಕ್ರಮ ಮತ್ತು ಸ್ವಯಂ ನಿವೃತ್ತಿ ಯೋಜನೆಯಡಿ ಸುಮಾರು ಒಂದು ಲಕ್ಷ ನೌಕರರನ್ನು ನಿವೃತ್ತಿಗೊಳಿಸುವ ಪ್ರಸ್ತಾವನೆಯನ್ನು ಸ್ಯಾಮ್ ಪಿತ್ರೋಡಾ ಸಲ್ಲಿಸಿದ್ದರು. ಕಂಪನಿಯ ಆಡಳಿತ ಮಂಡಳಿ ಈ ವರದಿಯನ್ನು ಒಪ್ಪಿಕೊಂಡಿತ್ತು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಂಪನಿ ನೌಕರರು ಮಾರ್ಚ್ 15ರಂದು ದೇಶದಾದ್ಯಂತ ಒಂದು ದಿನ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಎಸ್ಎನ್ಎಲ್
ಕಂಪನಿಯ ಸುಮಾರು 15 ನೌಕರರ ಒಕ್ಕೂಟಗಳು ಮಾರ್ಚ್ 15ರಂದು ಮುಷ್ಕರ ನಡೆಸಲಿವೆ ಎಂದು ನೌಕರರ ಸಂಘದ ಜಂಟಿ ಸಂಯೋಜಕ ವಿಈನ್ ನಂಬೂದರಿ ತಿಳಿಸಿದ್ದಾರೆ. ಮಾರ್ಚ್ 15ರಂದು ಸಭೆ ನಡೆಸಿದ ಬಳಿಕ ಮುಂದಿನ ಕಾರ್ಯತಂತ್ರಗಳ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.











Click it and Unblock the Notifications