ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದೇ ಪದೇ ಕೀಲಿಮಣೆ ಕುಟ್ಟಿ ಕೆಟ್ಟೆ

By Mahesh
|
Google Oneindia Kannada News

Mobile phone,Computer keyboard nerds suffer RSI
ಮುಂಚೆ ಟೈಪ್ ರೇಟರ್ , ಕಂಪ್ಯೂಟರ್ ಕೀ ಬೋರ್ಡ್ ಕೀಲಿ ಮಣೆ ಕುಟ್ಟಿ(ಟೈಪ್ ಮಾಡುತ್ತಾ ಎಂದು ಓದಿ ಕೊಳ್ಳುವುದು) ಕುಟ್ಟಿ ಅಂದವಾದ ಬೆರಳುಗಳನ್ನು ಹಾಳುಗೆಡವಿಸಿಕೊಳ್ಳುತ್ತಿದ್ದದ್ದು ಮಾಮೂಲಿ. ಈಗ ಮೊಬೈಲ್ ಫೋನ್ ಬಳಕೆ ಹೆಚ್ಚಾದ ಮೇಲೆ, ಅದರಲ್ಲೂ ಮೊಬೈಲ್ ಗಳು ಕಾಲೇಜುಗಳಲ್ಲಿ ನಿಷೇಧಗೊಂಡ ಮೇಲೆ, ಕದ್ದು ಮುಚ್ಚಿ, ಗೆಳೆಯ ಗೆಳತಿಯರಿಗೆ ಎಸ್ಎಂಎಸ್ ಕಳಿಸುವ ಚಟ ಯುವ ಜನಾಂಗಕ್ಕೆ ಅಂಟಿಕೊಂಡಿದೆ.

ಇದನ್ನು ವಯಸ್ಸಿನ ಸಹಜ ಆಕರ್ಷಣೆ ಇರಲಿ ಬಿಡಿ,ಎನ್ನುವಂತಿಲ್ಲ. ಕಾರಣ, ಹೀಗೆ ಪದೇ ಪದೇ ಮೊಬೈಲ್ ನ ಸಣ್ಣ ಕೀಪ್ಯಾಡ್ ಕುಟ್ಟುತ್ತಾ, ಇದ್ದರೆ ಆಸ್ಪತ್ರೆ ಕದ ತಟ್ಟಬೇಕಾಗುತ್ತದೆ. ಅದು ಹೇಗೆ ಎಂದರೆ, Repetitive Strain Injury (RSI) ಎಂಬ ವ್ರಣ ಇತ್ತೀಚೆಗೆ ಸಾಮಾನ್ಯವಾಗಿ ಯುವಕರಿಂದ ಹಿಡಿದು ಮೊಬೈಲ್ ಎಸ್ಎಂಎಸ್ ಮಾಡುವ ಚಟವಿರುವ ಎಲ್ಲರಿಗೂ ಹಬ್ಬುತ್ತಿದೆ.

ಸಿಟಿ ಆಸ್ಪತ್ರೆಯ ವೈದ್ಯ ಜೆರಿಷ್ ಜೋಸ್ ಹೇಳುವ ಪ್ರಕಾರ, ಇತ್ತೀಚೆಗೆ ಸುಮಾರು 10ಕ್ಕೂ ಹೆಚ್ಚು ಎಸ್ ಎಂಎಸ್ ಹಾವಳಿಗೆ ತುತ್ತಾದ ಬೆರಳುಗಳ ಪ್ರಕರಣಗಳು ದಾಖಲಾಗಿದೆಯಂತೆ. ಅದರಲ್ಲೂ ಪಿಯೂ ವಿದ್ಯಾಥಿಗಳೇ ಹೆಚ್ಚು. ಅಯ್ಯೋ ಬರೀ ಬೆರಳುಗಳಿಗೆ ತಾನೇ ನೋವಾಗುವುದು ಎಂದು ಉದಾಸೀನ ಮಾಡುವಂತಿಲ್ಲ. ಈ ಸಿಂಡ್ರೋಮ್ ಗೆ ಒಳಗಾದವರಿಗೆ ಕತ್ತು, ಭುಜ, ಮೊಣಕೈ, ತೋಳುಗಳು, ಮಣಿಕಟ್ಟು ಸೇರಿದಂತೆ, ಸ್ನಾಯು ಸೆಳೆತದ ತೀವ್ರ ನೋವಿಗೆ ಗುರಿಯಾಗುವ ಸಂಭವ ಹೆಚ್ಚು ಎನ್ನುತ್ತಾರೆ ಡಾಕ್ಟರ್ ಜೋಸ್.

ಕೈ ಕಾಲುಗಳಿಗೆ ರಕ್ತ ಸಂಚಾರ ಕಮ್ಮಿಯಾಗಿ ಜೋಮು ಹಿಡಿಯುವಂತೆ, ಪದೇ ಪದೇ ಒಂದೆ ಭಂಗಿ, ಒಂದೇ ಅಂಗದ ಮೇಲೆ ಒತ್ತಡ ಹೇರುತ್ತಾ ಹೋದಂತೆ, ಆ ಭಾಗ ಮರಗಟ್ಟಿದಂತಾಗಿ ನೋವು ಶುರುವಾಗುತ್ತದೆ. ನೋವು, ಉರಿ, ಊತ ಇವೆಲ್ಲಾ RSI ನ ಲಕ್ಷಣಗಳಾಗಿವೆ. ವರ್ಷವೊಂದರಲ್ಲಿ ಬೆಂಗಳೂರು ನಗರದಲ್ಲಿ ಕನಿಷ್ಠವೆಂದರೂ 200 ಜನ ಪಿಯೂ ವಿದ್ಯಾರ್ಥಿಗಳು RSI ಗೆ ಚಿಕಿತ್ಸೆ ಪಡೆಯುತ್ತಾರೆ. ಈ ಸಂಖ್ಯೆ ಅಧಿಕವಾಗುತ್ತಲೇ ಇದೆ. ಐಟಿ ಜನರಲ್ಲಿ RSI ಲಕ್ಷಣಗಳು ಕಂಡು ಬಂದರೂ, ಉದಾಸೀನತೆಯಿಂದ ಚಿಕಿತ್ಸೆಯಿಂದ ದೂರ ಉಳಿಯುತ್ತಿದ್ದಾರೆ ಎಂದು ಡಾ. ಜೋಸ್ ವಿವರ ನೀಡಿದರು.

RSI ಗೆ ಚಿಕಿತ್ಸೆ ಇದೇ ಆದರೂ, ಜನರಿಗೆ ಇದರ ಬಗ್ಗೆ ಅರಿವು ಕಮ್ಮಿ. ಹಾಗೂ ಇದರ ಬಗ್ಗೆ ತಿಳಿದವರು ಉದಾಸೀನತೆಯಿಂದ ಗಾಯ ಉಲ್ಬಣ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಮೊಬೈಲ್ ಕೀ ಪ್ಯಾಡ್ ನಲ್ಲಿ ಬದಲಾವಣೆ, ಕಂಪ್ಯೂಟರ್‍ ಕೀಲಿ ಮಣೆಯ ವಿನ್ಯಾಸದಲ್ಲಿ ಬದಲಾವಣೆ, ಕುಳಿತುಕೊಳ್ಳುವ ಭಂಗಿಯಲ್ಲಿ ಕೊಂಚ ಮಾರ್ಪಾಟು ಮಾಡಿಕೊಂಡರೆ, RSI ನ ತೊಂದರೆಯಿಂದ ಮುಕ್ತರಾಗಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X