ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವೇಂದ್ರಗೆ ಎರಡು ಪಂದ್ಯಕ್ಕೆ ಮಾತ್ರ ನಿಷೇಧ

By Staff
|
Google Oneindia Kannada News

Shivendra Singh
ನವದೆಹಲಿ, ಮಾ. 2 : ಭಾರತದ ಹಾಕಿ ಫೆಡರೇಷನ್ ಸಲ್ಲಿಸಿದ್ದ ಮೇಲ್ಮನವಿ ಪರಿಶೀಲನೆ ನಡೆಸಿದ ವಿಶ್ವಕಪ್ ಹಾಕಿ ಫೆಡರೇಷನ್ ಶಿವೇಂದ್ರ ಸಿಂಗ್ ಅವರಿಗೆ ಮೂರು ಪಂದ್ಯಗಳ ಬದಲಾಗಿ ಎರಡು ಪಂದ್ಯಗಳಿಗೆ ಮಾತ್ರ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಒರಟುತನದ ಆಟದ ಆಪಾದನೆಗೆ ಗುರಿಯಾಗಿರುವ ಶಿವೇಂದ್ರ ಸಿಂಗ್ ಅವರಿಗೆ ಮೂರು ಪಂದ್ಯಗಳ ನಿಷೇಧದ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆ ಕ್ರಮವನ್ನು ಪ್ರಶ್ನಿಸಿ ಭಾರತ ತಂಡದ ವ್ಯವಸ್ಥಾಪಕರು ವಿಶ್ವಕಪ್ ಟೂರ್ನಿ ನಿರ್ದೇಶಕರಿಗೆ ಮೇಲ್ಮನವಿ ಸಲ್ಲಿಸಿದ್ದರು. ಭಾನುವಾರ ರಾತ್ರಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮುನ್ಪಡೆ ಆಟಗಾರರ ಶಿವೇಂದ್ರ ಸಿಂಗ್ ಪಾಕಿಸ್ತಾನದ ಆಟಗಾರ ಫರೀದ್ ಅಹ್ಮದ್ ಕಣ್ಣಿಗೆ ಸ್ಟಿಕ್‌ನಿಂದ ಹೊಡೆದಿದ್ದರು. ದೈಹಿಕ ಹಲ್ಲೆ ನಡೆಸಿದಂತಾಗಿದ್ದು, ನೀತಿ ಸಂಹಿತೆಯ ಎರಡನೇ ಸ್ತರದ ಆಪಾದನೆ ಇದಾಗಿದೆ ಎಂದು ಹೇಳಲಾಗಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿ ಶಿವೇಂದ್ರ ಸಿಂಗ್‌ಗೆ ಮೂರು ಪಂದ್ಯಗಳ ನಿಷೇಧದ ಶಿಕ್ಷೆ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ವಕ್ತಾರ ಅರ್ಜೆನ್ ಮೇಜರ್ ತಿಳಿಸಿದ್ದರು. ಪಂದ್ಯದ 39ನೇ ನಿಮಿಷದಲ್ಲಿ ಶಿವೇಂದ್ರ ಸಿಂಗ್ ಮತ್ತು ಫರೀದ್ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಹೋರಾಟ ನಡೆಸಿದ್ದರು.

ಆಗ ಭಾರತೀಯ ಆಟಗಾರ ಚೆಂಡಿನ ಮೇಲೆ ಸ್ವಲ್ಪ ಪ್ರಭುತ್ವ ಸ್ಥಾಪಿಸಿ ಮುನ್ನಡೆಯಲೆತ್ನಿಸಿದಾಗ ಸ್ಟಿಕ್ ಪಾಕ್ ಆಟಗಾರನ ಕಣ್ಣಿಗೆ ಬಲವಾಗಿ ಬಡಿದು ಆತನನ್ನು ಗಾಯಗೊಳಿಸಿತು. ಆಗ ಸ್ವಲ್ಪ ರಕ್ತಸ್ರಾವವಾಯಿತು. ಇದೀಗ ಶಿವೇಂದ್ರ ಸಿಂಗ್ ನಾಳಿನ ಮಹತ್ವದ ಆಸ್ಟ್ರೇಲಿಯಾ, ಮಾರ್ಚ್ 4ರ ಸ್ಪೇನ್ ವಿರುದ್ಧ ಪಂದ್ಯಗಳಿಂದ ಹೊರಗುಳಿಯಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X