ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಧಾನಮಂಡಲ:ಸಿಎಂ ಜೊತೆ ರೇವಣ್ಣ ಬಿಸಿ ಚರ್ಚೆ
ಬೆಂಗಳೂರು, ಮಾ 2 : ಅಧಿಕಾರಿಗಳು ನಿಮಗೆ ಸರಿಯಾಗಿ ಚೀಟಿ ಬರೆದು ಕೊಡುತ್ತಿಲ್ಲ ಸಾರ್, ಏನೇನೋ ಬರದು ಕೊಟ್ಟು ನಿಮ್ಮನ್ನು ಇಕ್ಕಟ್ಟಿನಲ್ಲಿ ಸಿಲುಕಿಸುತ್ತಾರೆ. ನೀವು ಸ್ವಲ್ಪ ಹುಷಾರ್ ಆಗಿರುವುದು ಒಳ್ಳೇದು, ಸ್ವಲ್ಪ ಸರಿಯಾಗಿ ನೋಡ್ಕೊಳ್ಳಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ರೇವಣ್ಣ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಲೇವಡಿ ಮಾಡಿದ್ದಾರೆ.
ವಿದ್ಯುತ್ ಸಮಸ್ಯೆ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿದ್ದ ರೇವಣ್ಣ, ಬಳ್ಳಾರಿಯಲ್ಲಿ ಎರಡನೇ ಘಟಕ, ವಾರಾಹಿ, ನಾಗಾರ್ಜುನ ಯೋಜನೆಗೆ ಚಾಲನೆ ನೀಡಿದ್ದು ನಮ್ಮ ಸರಕಾರ ಸ್ವಾಮಿ.ನೀವು18 ತಿಂಗಳಲ್ಲಿ ಏನು ಸಾಧನೆ ಮಾಡಿದ್ದೀರಾ ಹೇಳಿ ಎಂದು ಕುಮಾರಸ್ವಾಮಿಗಳ ಅಧಿಕಾರ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ ಯೋಜನೆಗಳ ಪಟ್ಟಿಯನ್ನು ಆಡಳಿತ ಪಕ್ಷಗಳಿಗೆ ನೀಡಿದರು.
ಬಳ್ಳಾರಿಯಲ್ಲಿ ವಿದ್ಯುತ್ ಘಟಕ ಸ್ಥಾಪಿಸಿದ್ದು ನಾವು. ನೀವು ಆಡ್ವಾಣಿ ಅವರನ್ನು ಕರೆಸಿ ಶಂಕುಸ್ಥಾಪನೆ ಮಾಡಿಸಿದ್ರಿ. ಶಂಕುಸ್ಥಾಪನೆ, ಉದ್ಘಾಟನೆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ವಾರಾಹಿ ಯೋಜನೆಯನ್ನು ಪೂರ್ಣಗೊಳಿಸಿಮಾನ್ಯ ಮುಖ್ಯಮಂತ್ರಿಗಳೇ ಅದನ್ನು ಉದ್ಘಾಟಿಸಲಿ ಎಂದು ಕೀಲಿ ಕೈ ಕೊಟ್ಟಿದ್ದೇನೆ ಎಂದು ತಮ್ಮ ಎಂದಿನ ದಾಟಿಯಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.