ಕಾರ್ಲ್ಟನ್ ದುರಂತ : ನಾಲ್ವರ ಬಂಧನ
ಬೆಂಗಳೂರು,
ಫೆ. 28 : ಕಾರ್ಲ್ಟನ್ ಟವರ್ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರ ಸಂಘದ ಕಾರ್ಯದರ್ಶಿ ಸೇರಿದಂತೆ ನಾಲ್ವರನ್ನು ಜೀವನ್ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ. id="toptextpromo"> ಕಟ್ಟಡ ಮಾಲೀಕರ ಸಂಘದ ಕಾರ್ಯದರ್ಶಿ ಮುನಿರೆಡ್ಡಿಪಾಳ್ಯ ನಿವಾಸಿ ರಫೀಕ್ ಉರ್ ರೆಹೆಮಾನ್(45), ಭದ್ರತಾ ವಿಭಾಗದ ಕಾವಲ್ ಬೈರಸಂದ್ರದ ರಾಮಚಂದ್ರ ಭಂಡಾರಿ(54), ಸಿವಿರಾಮನ್ ನಗರದ ಚನ್ನಯ್ಯ(31) ಹಾಗೂ ಎಲೆಕ್ಟ್ರಿಕಲ್ ಸೂಪರ್ ವೈಸರ್ ಕೆಂಪೇಗೌಡ(31) ಬಂಧಿತ ಆರೋಪಿಗಳು. ಪ್ರಮುಖ ಆರೋಪಿಗಳಾದ ಅನುರಾಧಾ ಜೈನ್, ಎಸ್ ಎನ್ ಲಡಾನಿ ಸೇರಿದಂತೆ ಎಂಟು ಮಂದಿ ತಲೆಮರಿಸಿಕೊಂಡಿದ್ದಾರೆ. ಬಂಧಿತರು ಕಾರ್ಲ್ಟನ್ ಟವರ್ ನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಅಗ್ನಿ
ದುರಂತ ಸಂಭವಿಸಿದಾಗ ಎಲ್ಲರೂ ಪರಾರಿಯಾಗಿದ್ದರು. ಈ ಬಗ್ಗೆ ಜೀವನ್ ಭೀಮಾ ನಗರದಠಾಣೆಯಲ್ಲಿ ನಿರ್ಲಕ್ಷ್ಯದ ಬಗ್ಗೆ ದೂರು ನೀಡಲಾಗಿತ್ತು. ಹಲಸೂರು ಉಪವಿಭಾಗದ ಎಸಿಪಿ ಮಂಜಿನಾಥ್ ನೇತೃತ್ವದ ತಂಡ ಈ ನಾಲ್ವರನ್ನು ಶನಿವಾರ ಬಂಧಿಸಿತು.











Click it and Unblock the Notifications