ಮಣಿಕಟ್ಟಿಗೊಂದು ಎಲ್ ಜಿ ವಾಚ್ ಫೋನ್
ಬೆಂಗಳೂರು,
ಫೆ. 27: ಉನ್ನತ ತಂತ್ರಜ್ಞಾನವುಳ್ಳ ಮೊಬೈಲ್ ಫೋನ್ ಗಳು ಮಾರುಕಟ್ಟೆಗೆ ದಾಂಗುಡಿ ಇಡುವ ವೇಳೆಯಲ್ಲೇ, ಎಲ್ ಜಿ ಸಂಸ್ಥೆ ಮಣಿಕಟ್ಟಿಗೆ ಸರಿಹೊಂದುವ ವಾಚ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. id="toptextpromo">ಸ್ಕ್ರಾಚ್
ಪ್ರೂಫ್ ಇರುವ LG GD910 ವಾಚ್ ಫೋನ್ ಗಳು ಸಾಮಾನ್ಯ ವಾಚ್ ನಂತೆ ಕಾಣಿಸುತ್ತದೆ. ಆದರೆ, ನಿಮಗೆ ಬೇಕಾದಾಗ ವಾಚ್ ಅನ್ನು ಫೋನ್ ನಂತೆ ಬಳಸುವ ಸೌಲಭ್ಯ ನೀಡುತ್ತದೆ. 13.9 ಮಿ.ಮೀ ಸುತ್ತಳತೆಯ ಸಪೂರವಾದ ಈ ವಾಚ್ ಅನ್ನು ಎಲ್ ಜಿ ಭಾರತದ ಮಾರುಕಟ್ಟೆಗೆ ಮೊದಲು ಬಿಟ್ಟಿದೆ.3ಜಿ ತಂತ್ರಜ್ಞಾನ, ವಿಡಿಯೋ ಕಾಲಿಂಗ್ ಮುಂತಾದ ಉನ್ನತ ಸೌಲಭ್ಯಗಳು ಇದರಲ್ಲಿ ಲಭ್ಯ. ಬ್ಲೂ ಟೂಥ್ ಹೆಡ್ ಸೆಟ್ ಸೌಲಭ್ಯ ವಿರುವುದರಿಂದ ಕರೆ ಸ್ವೀಕಾರ ಸುಲಭ. id='are-slot-1' class='oiad oi-axt oiadv'> id='top-searched-articles'>ಸುಂದರ
ವಿನ್ಯಾಸದ ಈ ವಾಚ್ ಗಳು ಸ್ಟೈಲೀಷ್ ಹ್ಯಾಂಡ್ ಸೆಟ್ ಸಂಗ್ರಹ ಮಾಡುವವರ ಮೊದಲ ಆದ್ಯತೆ ಆಗುವ ಎಲ್ಲ ಸಾಧ್ಯತೆಯಿದೆ. ಎಲ್ ಜಿ ಯ ಈ ನೂತನ ಮೊಬೈಲ್ ಕಮ್ ವಾಚ್ ಫೋನ್ ನ ಬೆಲೆ ಕೂಡ ಅಷ್ಟೇ ಎತ್ತರದಲ್ಲಿದೆ. ಇದರ ಬೆಲೆ ಸುಮಾರು 49,990.











Click it and Unblock the Notifications