ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾರ್ಲ್ಟನ್ ಅಗ್ನಿ ದುರಂತ; ಮಾ.1ಕ್ಕೆ ತನಿಖಾ ವರದಿ
ಬೆಂಗಳೂರು, ಫೆ.27: ಒಂಬತ್ತು ಮಂದಿ ಸಾವಿಗೆ ಕಾರಣವಾದ ಹಳೆ ಮದ್ರಾಸ್ ರಸ್ತೆಯಲ್ಲಿರುವ ಕಾರ್ಲ್ಟನ್ ಟವರ್ ಅಗ್ನಿ ದುರಂತಕ್ಕೆ ಕಾರಣವಾದ ವಿವರಗಳನ್ನೊಳಗೊಂಡ ತನಿಖಾ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ ಎಸ್ ಎಲ್) ಅಧಿಕಾರಿಗಳು ಸೋಮವಾರ ಸಲ್ಲಿಸಲಿದ್ದಾರೆ.
ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಅಗ್ನಿ ದುರಂತ ಸಂಭವಿಸಿತ್ತು. ಪೊಲೀಸ್ ತನಿಖೆಯೂ ನಡೆಯುತ್ತಿದ್ದು ಸಂಸ್ಥೆಯ ಮಾಲೀಕ ಹಾಗೂ ಏಜೆಂಟ್ ಬಂಧನಕ್ಕೆ ಪ್ರಯತ್ನ ಸಾಗಿದೆ. ಅಗ್ನಿ ದುರಂತಕ್ಕೆ ಕಾರಣವಾದ ಅಂಶಗಳು ಯಾವುದು ಎಂಬ ಬಗ್ಗ್ಗೆ ಎಫ್ ಎಸ್ ಎಲ್ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.
ದುರಂತ ನಡೆದ ಬಳಿಕ ಕಾರ್ಲ್ಟನ್ ಟವರ್ ಕಟ್ಟಡವನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೂ ಪ್ರವೇಶ ನಿರಾಕರಿಸಲಾಗಿತ್ತು. ಈ ಸಂಬಂಧ ಪೊಲೀಸರ ಜೊತೆ ಸಿಬ್ಬಂದಿಗೆ ವಾಗ್ವಾದ ನಡೆದಿತ್ತು.
ಕಡೆಗೆ ಆಯಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತ್ತು. ಅಗ್ನಿ ದುರಂತ ನಡೆದ ದಿನ ಲ್ಯಾಪ್ ಟಾಪ್ ಹಾಗೂ ಹಣ ಕಳುವಾದ ಬಗ್ಗೆ ವರದಿಯಾಗಿದ್ದು , ಈ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿವೆ.