ವಿಜಯನಗರ ಪ್ರತಿಷ್ಠಾನಕ್ಕೆ ಭೂಮಿ, ತರೀಕೆರೆ ರಾಜೀನಾಮೆ

ಬುಧವಾರ ಕನ್ನಡ ವಿವಿ ಕುಲಪತಿ ಡಾ ಎ ಮುರಿಗೆಪ್ಪ ಅವರಿಗೆ ತರೀಕೆರೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ವಿಷಯವನ್ನು ವಿವಿ ಕುಲಪತಿ ಮುರಿಗೆಪ್ಪ ಸ್ಪಷ್ಟಪಡಿಸಿದ್ದಾರೆ. ತರೀಕೆರೆ ಅವರು ಕಳೆದ ಎರಡು ವರ್ಷಗಳಿಂದ ಕನ್ನಡಸಾಹಿತ್ಯ ಅಧ್ಯಯನ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಅವಧಿ ಇನ್ನೂ ಒಂದು ಬಾಕಿ ಇತ್ತು. ಡೀನ್ ಶಿಪ್ ರಾಜೀನಾಮೆ ಸಲ್ಲಿಸಿದ್ದರೂ ವಿವಿಯ ಪ್ರಾಧ್ಯಾಪಕರಾಗಿ ತರೀಕೆರೆ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications