ಸೋನಿಯಾ ಮನಸ್ಸು ಮಾಡಿದ್ರೆ ಸರಕಾರ ಖಲಾಸ್
ಚಿಕ್ಕಬಳ್ಳಾಪುರ,
ಫೆ. 21 : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮನಸ್ಸು ಮಾಡಿದರೆ ಯಾವುದೇ ಕ್ಷಣದಲ್ಲಿ ರಾಜ್ಯ ಸರಕಾರ ಪತನವಾಗಲಿದೆ. 2014ರ ಲೋಕಸಭೆ ಚುನಾವಣೆ ನಂತರ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಲು ಎಲ್ಲರೂ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಕರೆ ನೀಡಿದರು. id="toptextpromo"> ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ವಿದ್ಯುತ್ ಪೂರೈಕೆ, ಬಿಪಿಎಲ್ ಫಲಾನುಭವಿಗಳಿಗೆ ಪಡಿತರ ಹಂಚಿಕೆ ಸೇರಿದಂತೆ ಎಲ್ಲ ರಂಗಗಳಲ್ಲೂ ಸರಕಾರ ವಿಫಲವಾಗಿದೆ. ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಈ ಸರಕಾರ ತಾನಾಗಿಯೇ ಅಧಿಕಾರದಿಂದ ನಿರ್ಗಮಿಸಲಿದೆ ಎಂದರು. ಗ್ರಾಮ ಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಿ ಅಧಿಕಾರ ಬರುವುದು ಸೋನಿಯಾ ಗಾಂಧಿ ಹಾಗೂ ಯುವ ನಾಯಕ ರಾಹುಲ್ ಗಾಂಧಿ ಅವರ ಆಶಯ. ಈ ಆಶಯವನ್ನು ಸಾಕಾರ ಮಾಡಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು. id='are-slot-1' class='oiad oi-axt oiadv'> id='top-searched-articles'> 2014ರ ಚುನವಾಣೆಯಲ್ಲಿ ಯುವನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಅಲಂಕರಿಸುವಂತೆ ಮಾಡುವುದು ಕಾಂಗ್ರೆಸ್ ಕಾರ್ಯಕರ್ತರ ಗುರಿ ಆಗಬೇಕು. ರಾಹುಲ್ ಗಾಂಧಿ ಕೇಂದ್ರ ಸಚಿವರಾಗುವ ಎಲ್ಲ ಅವಕಾಶಗಳಿದ್ದವು. ಆದರೆ, ಅಧಿಕಾರವನ್ನು ನಿರಾಕರಿಸಿ ಸಮಾಜಸೇವೆ ಮತ್ತು ಪಕ್ಷ ಸಂಘಟನೆಯನ್ನು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿ ದೇಶದ ಪ್ರಧಾನಿಯಾಗಲು ಎಲ್ಲ ಶ್ರಮಿಸಬೇಕು ಎಂದು ಮೊಯ್ಲಿ ಹೇಳಿದರು.











Click it and Unblock the Notifications