ಕೆಂಪೇಗೌಡ ಬಡಾವಣೆಗೆ ಅಧಿಸೂಚನೆ
ಬೆಂಗಳೂರು,
ಫೆ. 19 : ನಗರದ ಪಶ್ಚಿಮ ಭಾಗದಲ್ಲಿ ಬಿಡಿಎ ನಿರ್ಮಿಸಲಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗಾಗಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲು ಸರಕಾರ ಒಪ್ಪಿಗೆ ಸೂಚಿಸಿದೆ. id="toptextpromo">ನೂತನ
ಬಡಾವಣೆಯು ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಮಧ್ಯಭಾಗದಲ್ಲಿ ಬರುವ 12 ಗ್ರಾಮಗಳ 4043 ಎಕರೆ 27 ಗುಂಟೆ ಜಮೀನಿನಲ್ಲಿ ತಲೆ ಎತ್ತಲಿದೆ. 2408 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಸರಕಾರ ಮಂಗಳವಾರ ಹೊರಡಿಸಿದ ಆದೇಶದಲ್ಲಿ ಅನುಮತಿ ನೀಡಿದೆ. ಬಿಡಿಎ ಇಂದು ಅಂತಿನ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಹೊಸಬಡಾವಣೆಯಲ್ಲಿ ವಿವಿಧ ಅಳತೆಯ ಸುಮಾರು 54,800 ನಿವೇಶನಗಳನ್ನು ರಚಿಸಲು ಯೋಚಿಸಿದೆ. id='are-slot-1' class='oiad oi-axt oiadv'> id='top-searched-articles'>ಕೆಂಗೇರಿ
ಹೊಬಳಿಯ ಕಮ್ಮಘಟ್ಟ, ಕೃಷ್ಣಸಾಗರ, ಭೀಮನಕುಪ್ಪೆ, ರಾಮಸಾಗರ, ಸೂಲಿಕೆರೆ, ಕೆಂಚನಪುರ, ರಾಮಸಂದ್ರ, ಚಳ್ಳಘಟ್ಟ, ಯಶವಂತಪುರ ಹೋಬಳಿಯ ಶೀಗೆಹಳ್ಳಿ, ಕನ್ನಹಳ್ಳಿ, ಕೊಡಿಗೆಹಳ್ಳಿ, ಮಂಗನಹಳ್ಳಿ ಗ್ರಾಮಗಳಲ್ಲಿನ ವಿವಿಧ ಸರ್ವೆ ಸಂಖ್ಯೆಗಲ ಜಮೀನಿನನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಬಿಡಿಎ ಹೇಳಿದೆ.











Click it and Unblock the Notifications