ನಕ್ಸಲರಿಂದ ಮತ್ತೆ ಮಾರಣಹೋಮ : 9 ಹತ್ಯೆ
ಪಾಟ್ನಾ,
ಫೆ. 18 : ಪಶ್ಚಿಮ ಬಂಗಾಲದ ಸಿಲ್ದಾ ಸೈನಿಕ ಶಿಬಿರದ ಮೇಲೆ ದಾಳಿ ನಡೆಸಿ ಮಾರಣಹೋಮ ನಡೆಸಿದ್ದ ನಕ್ಸಲರು ಬುಧವಾರ ರಾತ್ರಿ ಬಿಹಾರದ ಕಸಾರಿ ಗ್ರಾಮಕ್ಕೆ ನುಗ್ಗಿ ಮನಬಂದಂತೆ ಗುಂಡಿ ದಾಳಿ ನಡೆಸಿದ್ದ 9 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಗಾಯಗೊಂಡ 20 ಮಂದಿ ಆಸ್ಪತ್ರೆಗೆ ದಾಖಲಿಸಲಾಗಿದೆ. id="toptextpromo">120
ಶಸ್ತ್ರಸಜ್ಜಿತ ನಕ್ಸಲರು ಜಾಮುವಾ ಜಿಲ್ಲೆಯ ಕಸಾರಿ ಗ್ರಾಮಕ್ಕೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಗ್ರಾಮದ ಕೆಲವರು ಪೊಲೀಸರ ಮಾಹಿತಿ ನೀಡುವುದು ಮತ್ತು ಇತ್ತೀಚೆಗೆ ಈ ಗ್ರಾಮದ ಜನರು ಕೆಲ ನಕ್ಸಲರನ್ನು ಹತ್ಯೆಗೈದಿರುವುದು ನಕ್ಸಲರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ. ನಕ್ಸಲರು ನಡೆಸಿದ ಮಾರಣಹೋಮದಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟರೆ, 20 ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 5 ಮಂದಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಕ್ಸಲರ
ಹತ್ಯೆ ಖಂಡಿಸಿ ಮೂರು ದಿನಗಳ ಬಂದ್ ಘೋಷಣೆ ಆಚರಿಸಲಾಗುತ್ತಿತ್ತು. ಬುಧವಾರ ರಾತ್ರಿಗೆ ಬಂದ್ ಆಚರಣೆ ಮುಗಿಯುತ್ತಿತ್ತು. ಬಂದ್ ನ ಕೊನೆಯ ರಾತ್ರಿಯೇ ಕಸಾರಿ ಗ್ರಾಮಕ್ಕೆ ನುಗ್ಗಿದ ನಕ್ಸಲರು ಮಾರಣಹೋಮ ನಡೆಸಿದ್ದಾರೆ.











Click it and Unblock the Notifications