ಅನೈತಿಕ ಸಂಬಂಧ : ಸ್ಮಶಾನವಾದ ಸಂಸಾರ
ಬೆಂಗಳೂರು,
ಫೆ. 18 : ಅನುಮಾನದ ಹುಳು ಮನಸ್ಸಿಗೆ ಹೊಕ್ಕರೆ ಇಡೀ ಸಂಸಾರವೇ ನಾಶವಾಗುತ್ತದೆ ಎಂಬುದನ್ನು ಬಿಂಬಿಸುವ ಕತೆ ಇದು. ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿ ಆರು ವರ್ಷ ಕಳೆದ ನಂತರವೂ ಆ ಕುಟುಂಬದಲ್ಲಿ ಅನುಮಾನದ ಪಿಶಾಚಿ ನುಗ್ಗಿತು. ಇದರ ಪರಿಣಾಮವಾಗಿ ಪತಿ, ಪತ್ನಿ ಹಾಗೂ ಮಗು ದುರಂತ ಅಂತ್ಯ ಕಂಡಿದ್ದಾರೆ. ಇಂಥದೊಂದು ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. id="toptextpromo">ಖಾಸಗಿ
ಸಂಸ್ಥೆಯಲ್ಲಿ ಕೆಲ ಮಾಡುತ್ತಿದ್ದ ಪತಿ, ಪತ್ನಿಯ ಮೇಲೆ ಅನುಮಾನಗೊಂಡು ಚಿಕ್ಕಬೇಗೂರಿನಲ್ಲಿರುವ ಮನೆಯಲ್ಲಿ ಮಗುವನ್ನು ನೀರಿನ ಸಂಪಿನಲ್ಲಿ ಮುಳುಗಿಸಿ ಕೊಂದು, ನಂತರ ತಾನು ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ. ಈ ಸುದ್ದಿಯನ್ನು ತಿಳಿದು ಆಘಾತಗೊಂಡ ಪತ್ನಿ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಮೃತಪಟ್ಟವರನ್ನು
ದಾವಣಗೆರೆ ಮೂಲದ ಸಂತೋಷ್‌ಕುಮಾರ್ (28), ಪ್ರಜ್ವಲ್ (5) ಹಾಗೂ ಮಧುಮತಿ (26) ಎಂದು ಗುರುತಿಸಲಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.











Click it and Unblock the Notifications