ಎಸ್ಐ ಕೆನ್ನೆಗೆ ಬಾರಿಸಿದ ಇರಾನ್ ಯುವತಿ

ಎಸ್ ಐ ಮೇಲೆ ಹಲ್ಲೆ ನಡೆಸಿದ ಸಂಜಯ್ ನಗರ ನಿವಾಸಿ ಶರೀಂ ಎಂಬ ಯುವತಿ ಹಾಗೂ ಅವರ ಸ್ನೇಹಿತೆಯರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶರೀಂ ಇರಾನ್ ಮೂಲದವರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಗಣೇಶ್ ರಾವ್ ಅವರು ಸಿಬ್ಬಂದಿ ಜೊತೆ ರಾತ್ರಿ 12.40ರ ಸುಮಾರಿಗೆ ಕಬ್ಬನ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಆ ಸಂದರ್ಭದಲ್ಲಿ ಇದೇ ರಸ್ತೆಯಲ್ಲಿ ಕಾರು ಚಾಲನೆ ಮಾಡಿಕೊಂಡು ಬಂದ ಶರೀಂ ಮತ್ತು ಇವರ ಸ್ನೇಹಿತೆಯರು ಕುಡಿದಿರುವುದು ಗೊತ್ತಾದ ಕಾರಣ ಪೊಲೀಸರು ಅವರ ಚಾಲನಾ ಪರವಾನಿಗಿ ವಶಕ್ಕೆ ಮುಂದಾದರು. ಇದರಿಂದ ಕೋಪಗೊಂಡ ಯುವತಿಯರು ಕಾರಿನಿಂದ ಕೆಳಗಿಳಿದು ಎಸ್ ಐಗೆ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೇ ಎಡಗೈಗೆ ಕಚ್ಚಿ ಗಾಯಗೊಳಿಸಿದ್ದಾರೆ.
ಘಟನೆಯನ್ನು ವರದಿ ಮಾಡಲು ಬಂದ ಮಾಧ್ಯಮ ಪ್ರತಿನಿಧಿಗಳ ಮೇಲೂ ದಾಳಿ ನಡೆಸಿದರು ಯುವತಿಯರು ಕ್ಯಾಮರಾಗಳನ್ನು ಜಖಂಗೊಳಿಸಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಯುವತಿಯರ ಮೇಲೆ ಪ್ರತ್ಯೇಕ ಕೇಸ್ ದಾಖಲಿಸಿದ್ದಾರೆ.











Click it and Unblock the Notifications