ದಾವೂದ್ ಇಬ್ರಾಹಿಂ ಜೊತೆ ಗೌಡರ ಸ್ನೇಹ!
ಕೊಪ್ಪಳ,
ಫೆ. 18 : ಭೂಗತದೊರೆ ದಾವೂದ್ ಇಬ್ರಾಹಿಂಗಿಂತಲೂ ನೈಸ್ ಮುಖಂಡ ಅಶೋಕ್ ಖೇಣಿ ದೊಡ್ಡ ಡಾಕು ಎಂದು ಪದೇಪದೇ ಜರಿಯುತ್ತಿರುವ ಮಾಜಿ ಪ್ರಧಾನಿ ಪ್ರಧಾನಿ ದೇವೇಗೌಡರಿಗೆ ಖೇಣಿ ತಿರುಗೇಟು ನೀಡಿದ್ದು, ದಾವೂದ್ ಗೂ ದೇವೇಗೌಡರಿಗೂ ಸ್ನೇಹ, ಸಂಬಂಧ ಏನಾದ್ರು ಇರಬಹುದು ಎಂದು ಲೇವಡಿ ಮಾಡಿದ್ದಾರೆ. id="toptextpromo">ಗುರುವಾರ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವೇಗೌಡ ಒಬ್ಬ ಸ್ವಾರ್ಥ ರಾಜಕಾರಣಿ ಎಂದು ಟೀಕಿಸಿದ್ದಾರೆ. ನೈಸ್ ಸಂಸ್ಥೆ ಬೆಂಗಳೂರು ಮೈಸೂರು ಕಾರಿಡಾರ್ ರಸ್ತೆಯನ್ನು ಕಾನೂನು ಪ್ರಕಾರ ಮಾಡುತ್ತಿದ್ದು, ಯಾವ ಸಂದರ್ಭದಲ್ಲೂ ಕಾನೂನು ಉಲ್ಲಂಘನೆ ಮಾಡಿಲ್ಲ. ಇದೇ ಕಾರಣಕ್ಕಾಗಿ ನೈಸ್ ಗೆ ಯೋಜನೆ ಆರಂಭವಾದಾಗನಿಂದ ಈವರೆಗೆ ಸುಮಾರು 400 ಪ್ರಕರಣಗಳಲ್ಲಿ ಜಯ ದೊರೆತಿದೆ ಎಂದು ಖೇಣಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ರೈತರಪರ
ಹೋರಾಟ ಮಾಡುತ್ತಿರುವೆ ಎಂದು ಸುಳ್ಳು ಹೇಳಿ ಸ್ವಾರ್ಥ ರಾಜಕಾರಣ ಮಾಡುತ್ತಿರುವ ದೇವೇಗೌಡ ಈ ವರೆಗೂ ಒಂದೇ ಒಂದು ಪ್ರಕರಣದಲ್ಲಿ ಜಯ ಕಂಡಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು. ಪಕ್ಷದ ಹಿತಕ್ಕಾಗಿ ದೇವೇಗೌಡ ರಸ್ತೆಗಿಳಿದಿದ್ದಾರೆ ಹೊರತು ಅವರ ಹೋರಾಟದಲ್ಲಿ ರೈತರ ಹಿತದೃಷ್ಟಿಯಂತೂ ಎಳ್ಳಷ್ಟೂ ಇಲ್ಲ ಎಂದು ಖೇಣಿ ವ್ಯಂಗ್ಯವಾಡಿದರು.











Click it and Unblock the Notifications