ಪ್ರಮೋದ್ ಕರೆಗೆ ಓಗೊಟ್ಟ ಉತ್ತರ ಕರ್ನಾಟಕ

ಮಂಗಳೂರಿನಲ್ಲಿ ಇಂದು ಮೂರು ಬಸ್ ಗಳಿಗೆ ಕಲ್ಲು ತೂರಲಾಗಿದ್ದು, ಬಸ್ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಉಡುಪಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಮನೆಯ ಕಲ್ಲು ತೂರಲಾಗಿದೆ. ವಾಹನಗಳ ಮೇಲೆ ಕೂಡ ಕಲ್ಲು ತೂರಾಟ ನಡೆದಿದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ.
ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ್, ಬಿಜಾಪುರ, ಬಾಗಲಕೋಟೆಯಲ್ಲಿಯೂ ಬಂದ್ ಗೆ ಜನ ಉತ್ತಮವಾಗಿ ಸ್ಪಂದಿಸಿದ್ದಾರೆ. ಧಾರವಾಡದ ಎಲ್ಲಾ ಖಾಸಗಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬಾಲಗಕೋಟೆಯ ಬಿಳಗಿಯಲ್ಲಿ ಆರು ಬಸ್ ಗಳು ಕಲ್ಲು ತೂರಾಟದಿಂದ ಜಖಂಗೊಂಡಿವೆ. ಈ ಎಲ್ಲ ನಗರಗಳಲ್ಲಿ ಅಂಗಡಿ ಮುಂಗಟ್ಟುಗಳು ಕೂಡ ವಹಿವಾಟನ್ನು ಸ್ಥಗಿತಗೊಳಿಸಿವೆ. ಗದಗದಲ್ಲಿ ಕೆಲ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಮೆಣಸಿನಕಾಯಿ ಮಾರುಕಟ್ಟೆಗೆ ಬೀಗ ಜಡಿಯಲಾಗಿದೆ.
ಬೆಂಗಳೂರಿನಲ್ಲಿ ಮಾತ್ರ ಬಂದ್ ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಸಾರ್ವಜನಿಕ ಬಸ್ ಸಂಚಾರ ಎಂದಿನಂತೆ ಸಾಗಿದೆ. ಅಂಗಡಿ ಮುಂಗಟ್ಟುಗಳು ಕೂಡ ವಹಿವಾಟನ್ನು ಮುಂದುವರಿಸಿವೆ. ಮುಂಜಾಗ್ರತಾ ಕ್ರಮವಾಗಿ ಶ್ರೀರಾಮಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದರಿಂದ ಬಂದ್ ಬಿಸಿ ರಾಜಧಾನಿಯಲ್ಲಿ ತಟ್ಟಿಲ್ಲ.
ಹಾಸನದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿ. ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿಗಳ ಶಟರ್ ಎಳೆದಿದ್ದಾರೆ, ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ, ಬಸ್ ಸಂಚಾರ ಎಂದಿನಂತೆ ಸಾಗಿದೆ. ರಾಜ್ಯದ ಎಲ್ಲೆಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾಗಿ ಬಿಗಿ ಭದ್ರತೆ ನೀಡಲಾಗಿದೆ.












Click it and Unblock the Notifications