ಕೋರ್ಟ್ ನಿಂದ ಸರಕಾರಕ್ಕೆ ಮತ್ತೆ ಮಂಗಳಾರತಿ
ಬೆಂಗಳೂರು,
ಫೆ 8 : ಬಿಬಿಎಂಪಿ ಚುನಾವಣೆ ನಡೆಸಲು ಸರಕಾರಕ್ಕೆ ಆಸಕ್ತಿ ಇದ್ದಂತಿಲ್ಲ. ಕುಂಟು ನೆಪಗಳನ್ನು ನೀಡಿ ಚುನಾವಣೆಯನ್ನು ಮುಂದೂಡುವ ಪ್ರಯತ್ನ ನಡೆಸುತ್ತಲೇ ಇದೆ. ಈ ನಿಮ್ಮ ನಿಲುವನ್ನು ನಾಳೆಯೊಳಗೆ ಸ್ಪಷ್ಟಪಡಿಸಿ ಎಂದು ಹೈಕೋರ್ಟ್ ವಿಭಾಗೀಯ ಪೀಠ ಸರಕಾರಕ್ಕೆ ಆದೇಶ ನೀಡಿದೆ. id="toptextpromo">ಫೆ21
ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಕೋರ್ಟ್ ಗಮನಕ್ಕೆ ತಾರದೆ ಏಕಾಏಕಿ ರದ್ದು ಪಡಿಸಿರುವ ನಿರ್ಧಾರ ಪ್ರಶ್ತ್ನಿಸಿ ಮಾಜಿ ಮೇಯರ್ ಗಳು ಸಲ್ಲಿಸಿದ್ದ ವಿಚಾರಣೆಗೆ ತೆಗೆದುಕೊಂಡ ಪೀಠ, ಸುಮ್ಮನೆ ನೀವು ವಾದ ಮಾಡುವುದರಲ್ಲಿ ಅರ್ಥವಿಲ್ಲ. ಬಿಬಿಎಂಪಿ ಚುನಾವಣೆಗೆ ಮುಕ್ತಿ ಯಾವತ್ತು? ಸರಕಾರ ಮೊದಲು ಚುನಾವಣೆಗೆ ಸಿದ್ದವಿದೆಯೇ ಎಂದು ಮೊದಲು ಅರ್ಜಿ ಸಲ್ಲಿಸಿ ನ್ಯಾಯಲಕ್ಕೆ ಮನವರಿಕೆ ಮಾಡಿಕೊಡಿ ಎಂದು ತರಾಟೆಗೆ ತೆಗೆದುಕೊಂಡಿತು. id='are-slot-1' class='oiad oi-axt oiadv'> id='top-searched-articles'>ನ್ಯಾ.
ಮಂಜುಳಾ ಚೆಲ್ಲೂರು ಮತ್ತು ನ್ಯಾ. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ನ್ಯಾಯಪೀಠ, ಸರಕಾರ ತನ್ನ ನಿಲುವನ್ನು ಇನ್ನೂ ಸ್ಪಷ್ಟ ಪಡಿಸಲಿಲ್ಲ. ಗೋಡೆಗೆ ಚೆಂಡು ಹೊಡೆಯುವ ಕೆಲಸ ಬಿಟ್ಟು ಚುನಾವಣೆ ವಿಚಾರದಲ್ಲಿ ಸರಕಾರ ಒಂದು ನಿರ್ಧಾರಕ್ಕೆ ಬರಲಿ ಎಂದು ಸಲಹೆ ನೀಡಿದೆ.











Click it and Unblock the Notifications