ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಟ್ಟದ ತಾಯಿ ಮಡಿಲಲ್ಲಿ ಧನ ಕನಕ ರಾಶಿ!

By Mahesh
|
Google Oneindia Kannada News

Chamundi Temple Mysore
ಮೈಸೂರು, ಫೆ. 4: ಮಹಿಷಪುರದ ಅದಿದೇವತೆ ತಾಯಿ ಚಾಮುಂಡೇಶ್ವರಿ ದೇವಾಲಯದ ಹುಂಡಿಯಲ್ಲಿ ಈಗ ಭಕ್ತರ ಧನ ಕನಕಗಳು ತುಂಬಿ ತುಳುಕುತ್ತಿದೆ. ಕಳೆದ ಮೂರು ತಿಂಗಳ ಅಂತರದಲ್ಲಿ 86.21ಲಕ್ಷ ರೂ. ಸಂಗ್ರಹವಾಗಿದೆ.

ಇತಿಹಾಸ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಪ್ರತಿ ದಿನ ಭೇಟಿ ನೀಡುತ್ತಿರುವ ಭಕ್ತರ ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದಕ್ಕೆ ಈ ಪ್ರಮಾಣದ ನಗ ಹಾಗೂ ನಗದು ಸಂಗ್ರಹವಾಗಿರುವುದು ಸಾಕ್ಷಿಯಾಗಿದೆ. ಭಕ್ತಾಧಿಗಳು ಹಣ, ಚಿನ್ನ, ಬೆಳ್ಳಿ, ಸೀರೆಗಳ ರೂಪದಲ್ಲಿ ದೇವಾಲಯಕ್ಕೆ ಕಾಣಿಕೆ ಅರ್ಪಿಸುತ್ತಿದ್ದಾರೆ. ಪ್ರತಿ ದಿನ 30,000ಕ್ಕಿಂತಲೂ ಹೆಚ್ಚು ಭಕ್ತಾಧಿಗಳು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಕಳೆದ ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಕಾಣಿಕೆ ರೂಪದಲ್ಲಿ 86.21ಲಕ್ಷ ರೂ. ನಗದು, 5,575 ಗ್ರಾಂ ಚಿನ್ನ ಹಾಗೂ 1,724 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಕಳೆದ ಬಾರಿ 76.32ಲಕ್ಷ ರೂ. ನಗದು, 3765ಗ್ರಾಂ. ಚಿನ್ನ ಹಾಗೂ 1543ಗ್ರಾಂ .ಬೆಳ್ಳಿ ಸಂಗ್ರಹವಾಗಿತ್ತು ಚಾಮುಂಡಿ ಬೆಟ್ಟದ ದೇವಾಲಯಗಳಲ್ಲಿ ಉತ್ತಮ ಆದಾಯವಿದ್ದರೂ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಆಗಬೇಕಾಗಿದೆ.

ರಾಜಗೋಪುರ ನವೀಕರಣ, ಬ್ರಹ್ಮ ಕಲಶೋತ್ಸವ, ಬಸ್ಸು ಹಾಗೂ ಟಾಕ್ಸಿ ನಿಲ್ದಾಣ ನವೀಕರಣ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ರಸ್ತೆ ಅಭಿವೃದ್ಧಿ ವಸತಿ ಗೃಹ ನವೀಕರಣ ಮೊದಲಾದ ಕಾರ್ಯಗಳು ನಡೆಯಬೇಕಾಗಿದೆ. ಈ ದೇವಾಲಯವು ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಕಾರಣ ಅಭಿವೃದ್ಧಿ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ದೇಗುಲದ ಪರಮ ಭಕ್ತರೊಬ್ಬರು ತಮ್ಮ ನೋವನ್ನು ಹಂಚಿಕೊಂಡರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X