ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನವಾಸಿ ಬಳಗದ ನುಡಿಯರಿಮೆ ಮತ್ತು ಕಲಿಕೆ

By Shami
|
Google Oneindia Kannada News

Kannada language learning, seminar by Banavasi Balaga
ಬೆಂಗಳೂರು, ಫೆ. 4 : ಏಳಿಗೆಗೆ ಕಲಿಕೆಯು ಮೊದಲನೆಯ ಮೆಟ್ಟಿಲೆಂದೂ, ಆ ಕಲಿಕೆಯು ತಾಯ್ನುಡಿಯಲ್ಲಿದ್ದರೇ ಅತ್ಯುತ್ತಮವೆಂದೂ, ಆದ್ದರಿಂದ ಕನ್ನಡಿಗರ ತಾಯ್ನುಡಿಯಾದ ಕನ್ನಡದ ಸರಿಯಾದ ಅಧ್ಯಯನವಾಗಬೇಕು ಮತ್ತು ಆ ಅಧ್ಯಯನದ ಫಲವು ಕನ್ನಡ ಮಾಧ್ಯಮದ ಕಲಿಕೆಯ ಏರ್ಪಾಡಿನಲ್ಲಿ ಅಳವಡಿಕೆ ಆಗಬೇಕೆಂಬುದು ಬನವಾಸಿ ಬಳಗದ ನಂಬಿಕೆಯಾಗಿದೆ.

ಇದೇ ನಿಟ್ಟಿನಲ್ಲಿ ಬರೋ ಫೆಬ್ರವರಿ 7ರ ಭಾನುವಾರ ಬೆಳಿಗ್ಗೆ 11 ಘಂಟೆಗೆ, ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ಭಗವಾನ್ ಮಹಾವೀರ ಜೈನ್ ಕಾಲೇಜಿನಲ್ಲಿ "ನುಡಿಯರಿಮೆ ಮತ್ತು ಕಲಿಕೆ" ಅನ್ನುವ ವಿಚಾರ ಸಮ್ಮೇಳನವನ್ನು ಹಮ್ಮಿಕೊಂಡಿದ್ದೇವೆ. ನಾಡಿನ ಖ್ಯಾತ ಭಾಷಾ ವಿಜ್ಞಾನಿಗಳಾದ ನಾಡೋಜ ಡಾ. ಡಿ.ಎನ್. ಶಂಕರಭಟ್, ಡಾ. ಎನ್.ಎಸ್. ರಘುನಾಥ್, ಡಾ. ಕೆ.ವಿ. ನಾರಾಯಣ ಮತ್ತು ನ್ಯೂಯಾರ್ಕ್ ನ ಸ್ಟೋನಿಬ್ರುಕ್ ವಿಶ್ವವಿದ್ಯಾಲಯದ ಪ್ರೋಫೆಸರ್ ಡಾ. ಎಸ್.ಎನ್. ಶ್ರೀಧರ್ ಅವರು ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ.

ಕರ್ನಾಟಕವೊಂದೇ ಅಲ್ಲದೇ ದೇಶದ ಹಲವು ಭಾಗದಿಂದ ಶಿಕ್ಷಣ ಮತ್ತು ಭಾಷಾ ವಿಜ್ಞಾನದ ವಿಷಯಗಳಲ್ಲಿ ಅಪಾರ ಸಾಧನೆಗೈದಿರುವ 90ಕ್ಕೂ ಹೆಚ್ಚು ಗಣ್ಯರು ಈ ಕಾರ್ಯಕ್ರಮದಲ್ಲಿ, ಅಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ ಬನವಾಸಿ ಬಳಗದ ಕಾರ್ಯದರ್ಶಿ ಕಿರಣ್ ಬಿ.ಆರ್. ತಿಳಿಸಿದ್ದಾರೆ. ಈ ವಿಚಾರ ಸಮ್ಮೇಳನದ ಇನ್ನಿತರ ಅನೇಕ ಮಾಹಿತಿಗಳಿಗೆ ನೋಡಿ : http://banavasibalaga.org/kn2010.html

ಸೂಚನೆ : ಈ ಕಾರ್ಯಕ್ರಮ ಒಂದು ಶೈಕ್ಷಣಿಕ ಕಾರ್ಯಕ್ರಮವಾದ್ದರಿಂದ ವಿಶೇಷ ಆಹ್ವಾನಿತರಿಗೆ ಮಾತ್ರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X