ತಿರುಪತಿ ರೈಲು ಚಾ.ನಗರಕ್ಕೂ ಬರಲಿದೆ!
ಮೈಸೂರು
ಫೆ 3 : ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ತಿರುಪತಿ - ಮೈಸೂರು ಫಾಸ್ಟ್ ಪ್ಯಾಸೆಂಜರ್ ರೈಲನ್ನು ಚಾಮರಾಜನಗರ ನಗರದ ವರೆಗೆ ವಿಸ್ತರಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಈ ರೈಲು ಸಂಚಾರ ನಾಳೆ (ಫೆ 4 ) ರಿಂದ ಆರಂಭವಾಗುತ್ತಿದೆ. ಕಳೆದ ಬಜೆಟ್ ನಲ್ಲಿ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಚಾಮರಾಜನಗರದ ವರೆಗೆ ವಿಸ್ತರಿಸುವ ಘೋಷಣೆ ಮಾಡಿದ್ದರು. id="toptextpromo">ಚಾಮರಾಜನಗರ
>> ನಂಜನಗೂಡು>> ಮೈಸೂರು>> ಬೆಂಗಳೂರು ಮಾರ್ಗವಾಗಿ ತಿರುಪತಿಗೆ ತೆರಳುವ ರೈಲಿಗೆ, ರೈಲ್ವೆ ರಾಜ್ಯ ಸಚಿವ ಕೆ ಎಚ್ ಮುನಿಯಪ್ಪ ನಾಳೆ ಮಧ್ಯಾಹ್ನ 3ಗಂಟೆಗೆ ಹಸಿರು ನಿಶಾನೆ ತೋರಿಸಲಿದ್ದಾರೆಂದು ಚಾಮರಾಜನಗರ ಸಂಸದ ಧ್ರುವ ನಾರಾಯಣ್ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದಕ್ಕೂ
ಮುನ್ನ ಮಧ್ಯಾಹ್ನ 1 .30 ಕ್ಕೆ ರೈಲ್ವೆ ನಿಲ್ದಾಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಧ್ರುವನಾರಾಯಣ, ಸಿದ್ದರಾಮಯ್ಯ ಮುಂತಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಇಜ್ಜತ್ ಮಾಸಿಕ ಪಾಸ್ ನ್ನು2500 ಮಂದಿಗೆ ವಿತರಿಸಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.











Click it and Unblock the Notifications